ಮಸೀದಿ ಗೋಡೆಯಲ್ಲಿ ಶ್ರೀರಾಮ ಬರಹ: ಮುಸ್ಲಿಂಮರಿಂದ ಭಾರೀ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮಸೀದಿಯೊಂದರ ಗೋಡೆಯ ಮೇಲೆಧಾರ್ಮಿಕ ಘೋಷಣೆಗಳನ್ನು ಬರೆದಿದ್ದು ಕೋಮು ಗಲಭೆಗೆ ಕಾರಣವಾದ ಘಟನೆ ನಡೆದಿದೆ.

ಮಜಲ್‌ಗಾಂವ್‌ನ ಮರ್ಕಝಿ ಮಸೀದಿಯ ಗೋಡೆಯ ಮೇಲೆ ಸಂಜೆಯ ಸಮಯದಲ್ಲಿ ವ್ಯಕ್ತಿಯೊಬ್ಬ ‘ಶ್ರೀರಾಮ’ ಎಂದು ಬರೆದಿದ್ದಾನೆ. ಇದನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂಮರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ನಾಕಾಬಂಧಿ ಹಾಕಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮಜಲಗಾಂವ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಧೀರಜ್ ಕುಮಾರ್, ನಾವು ಸೆಕ್ಷನ್ 295 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ನಾವು ಬರೆದವರನ್ನುಪತ್ತೆ ಹಚ್ಚುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!