ನದಿಯಲ್ಲಿ ತೇಲಿಬರುತ್ತಿವೆ ಹೆಣಗಳು….ಅಕ್ಷರಶಃ ಸ್ಮಶಾನದಂತಾಗಿದೆ ‘ದೇವರ ನಾಡು’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸದಾ ಹಸಿರು, ಸ್ವಚ್ಛಂದವಾಗಿ ಹರಿಯುವ ನೀರು, ಬೆಚ್ಚಗಿನ ಊಟ, ದಿನನಿತ್ಯದ ಕೆಲಸ.. ವಯನಾಡಿನ ಈ ಜೀವನ ಇದೀಗ ಅಲ್ಲೋಲ ಕಲ್ಲೋಲವಾಗಿದೆ, ಭೂಕುಸಿತ ಸಂಭವಿಸಿದ ಜಾಗದಲ್ಲಿ ಊರೊಂದಿತ್ತಾ ಎನ್ನುವ ಮಟ್ಟಿಗೆ ಬದಲಾಗಿದೆ.

Imageಕಣ್ಣಿಗೆ ಗೋಚರವಿರುವ ಈ ಮಣ್ಣಿನ ಹೆಂಟೆಯಡಿ ನೂರಾರು ಮಂದಿ ಸಮಾಧಿಯಾಗಿರುವ ಆತಂಕ ಎದುರಾಗಿದೆ. ದೇವರನಾಡು ಅಕ್ಷರಶಃ ಸ್ಮಶಾನದಂತೆ ಬದಲಾಗಿದೆ.

ಭಯಾನಕ ಭೂಕುಸಿತಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ಮುಂಜಾನೆ ಮುಂಡಕ್ಕೈ,  ಚೂರಲ್ಮಲಾ, ಅಟ್ಟಮಾಲಾ ಮತ್ತು ನೂಲ್ಪುಝಾ ಗ್ರಾಮದಲ್ಲಿ ಭೂಕುಸಿತ ಆಗಿದೆ. ಒಟ್ಟು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಭಾರೀ ಸಾವು ನೋವು ಸಂಭವಿಸಿದೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಹೆಣಗಳು ತೇಲಿ ಬರುತ್ತಿವೆ.

Image

ದೇವರ ನಾಡು ರಕ್ಕಸ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳನ್ನು ತೊಯ್ದುಬಿಟ್ಟಿವೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ದಳ, ಎನ್​ಡಿಆರ್​ಎಫ್​ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಮೃತದೇಹಗಳು ನದಿಯಲ್ಲಿ ತೇಲಿ ಹೋಗುತ್ತಿವೆ. 200ಹೆಚ್ಚು ಮನೆಗಳು ಭೂ ಕುಸಿತಕ್ಕೆ ಹಾನಿಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!