ಹೊಸದಿಗಂತ ಅಂಕೋಲಾ :
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದ ಪರಿಣಾಮ ಅಂಕೋಲಾದ ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ ಮೇಲೆ ಆಗಲಿದೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಶಿರೂರು ಭೂಕುಸಿತದಲ್ಲಿ ಕೇರಳದ ಲಾರಿ ಮತ್ತು ಚಾಲಕ ಅರ್ಜುನ್ ಸೇರಿ ಮೂವರ ಪತ್ತೆಯಾಗಬೇಕಿದೆ.
ಕರ್ನಾಟಕ ಸರ್ಕಾರ ಭೂಸೇನೆ, ನೌಕಾಸೇನೆ, ಎನ್.ಡಿಆರ್.ಎಫ್ ಸಹಿತ ಎಲ್ಲ ಆಧುನಿಕವಾದ ತಂತ್ರಜ್ಞಾನ ಬಳಸಿ ಯಶಸ್ಸು ಸಿಗದ ಕಾರಣ ತಾತ್ಕಾಲಿಕವಾಗಿ ಸ್ಥಗಿತ ಮಾಡಿತ್ತು.
ಕೇರಳ ಆಸಕ್ತಿ:
ಶಿರೂರು ಭೂಕುಸಿತದ ಸ್ಥಳಕ್ಕೆ ಕೇರಳ ಸಚಿವರು, ಶಾಸಕರು ,30 ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಬೀಡು ಬಿಟ್ಟಿದ್ದರು. ಅಲ್ಲಿಯವಾಹಿನಿಗಳು ಕೇರಳದ ಚಾಲಕ ಅರ್ಜುನ್ ಕುರಿತಾಗಿ ಕಾರ್ಯಾಚರಣೆಯನ್ನು ನಿರಂತರವಾಗಿ ಬಿತ್ತರಿಸುತ್ತಿದ್ದವು.
ರಾಜ್ಯ ಸರ್ಕಾರ ಕಾರ್ಯಾಚರಣೆಗೆ ಬ್ರೇಕ್ ಹಾಕುತ್ತಲೇ ಕೇರಳದ ಸಿಎಂ ಸ್ವತ: ತಮ್ಮ ಸರ್ಕಾರದ ವತಿಯಿಂದ ಕಾರ್ಯಾಚರಣೆಗೆ ಆಸಕ್ತಿ ತಳೆದಿದ್ದರು.
ಆದರೆ ಮಂಗಳವಾರ ಬೆಳಿಗ್ಗೆ ಕೇರಳದ ವಯನಾಡಿನಲ್ಲಿ ಅತಿ ಭೀಕರ ಕುಸಿತ ಆಗಿದ್ದು ಇಡೀ ಕೇರಳ ಸರ್ಕಾರ , ಮಾಧ್ಯಮಗಳು ಅತ್ತ ಹೊರಳಿವೆ. ಹೀಗಾಗಿ ಅಂಕೋಲಾ ಕಾರ್ಯಾಚರಣೆಗೆ ಕೇರಳ ಸರ್ಕಾರದ ಆಸಕ್ತಿ ಕುಗ್ಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.