Monday, September 26, 2022

Latest Posts

ಗುಜರಾತ್ ತಂಡದಿಂದ ಶುಭ್​ಮನ್ ಗಿಲ್ ಔಟ್: ಕುತೂಹಲ ಮೂಡಿಸಿದ ಫ್ರಾಂಚೈಸಿ ಅಚ್ಚರಿಯ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಪಿಎಲ್​ ಗೆ ಕಾಲಿಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡ ತನ್ನ ಮೊದಲ ಸೀಸನ್​ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಚಾರ ಎಲ್ಲರಿಗು ಗೊತ್ತಿರುವ ವಿಷಯ.

ಪಾಂಡ್ಯ ನಾಯಕತ್ವದಲ್ಲಿ ಈ ತಂಡ ಟ್ರೋಪಿ ಗೆದ್ದಿತ್ತಾದರೂ, ಈ ತಂಡದ ಗೆಲುವಿಗೆ ಪ್ರಮುಖ ಕಾರಣ ಈ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನು ನೀಡಿದ 100 ಪ್ರತಿಶತ ಪ್ರದರ್ಶನ. ಅಂತಹ ಆಟಗಾರರ ಪೈಕಿ ಟೀಂ ಇಂಡಿಯಾದ ಯುವ ಓಪನರ್ ಶುಭ್​ಮನ್ ಗಿಲ್ ಒಬ್ಬರು. ಆದರೆ ಗುಜರಾತ್ ಫ್ರಾಂಚೈಸ್ ಶನಿವಾರ ಮಾಡಿರುವ ಟ್ವೀಟ್​ನಿಂದ ಇಡೀ ಕ್ರಿಕೆಟ್ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.
ಶನಿವಾರ ಸಂಜೆ ಗುಜರಾತ್ ಫ್ರಾಂಚೈಸಿ ಅಚ್ಚರಿಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ನೋಡಿದವರೆಲ್ಲ ಗಿಲ್ ಜತೆಗಿನ ಸಂಬಂಧವನ್ನು ಗುಜರಾತ್ ಕಡಿದುಕೊಂಡಿದೆ ಎಂದು ಭಾವಿಸುತ್ತಿದ್ದಾರೆ.

ಗಿಲ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದು, ‘ಈ ಪ್ರಯಾಣವು ಸ್ಮರಣೀಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಗುಜರಾತ್ ಮಾಡಿರುವ ಟ್ವೀಟ್ ಏನೆಂದರೆ, ಇದು ನೆನಪಿಟ್ಟುಕೊಳ್ಳುವಂತಹ ಜರ್ನಿಯಾಗಿದೆ. ನಿಮ್ಮ ಮುಂದಿನ ಪ್ರಯತ್ನಕ್ಕೆ ನಾವು ಶುಭ ಹಾರೈಸುತ್ತೇವೆ ಶುಭಮನ್ ಗಿಲ್ ಎಂದು ಗುಜರಾತ್ ಟ್ವೀಟ್ ಮಾಡಿದೆ.

 

ಗುಜರಾತ್‌ನ ಈ ಟ್ವೀಟ್‌ನಿಂದ ಫ್ರಾಂಚೈಸ್, ಗಿಲ್ ಜೊತೆಗಿನ ಸಂಬಂಧವನ್ನು ಮುರಿಯಲು ಮನಸ್ಸು ಮಾಡಿದ್ದು, ಗಿಲ್ ಅವರನ್ನು ಮತ್ತೊಂದು ಫ್ರಾಂಚೈಸಿಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ತೋರುತ್ತದೆ. ಇದೇ ವೇಳೆ ಗಿಲ್ ಕೂಡ ಈ ಟ್ವೀಟ್​ಗೆ ರಿಟ್ವೀಟ್ ಮಾಡಿದ್ದು, ಅವರು ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡು ತಂಡವನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ತೋರುತ್ತದೆ. ಆದರೆ ಈ ವಿಷಯದ ವಾಸ್ತವ ಏನೆಂಬುದರ ಬಗ್ಗೆ ಇನ್ನು ಏನೂ ಸ್ಪಷ್ಟವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!