ಶುಭ್​ಮನ್ ಗಿಲ್ ಔಟ್?: ವಿವಾದಾತ್ಮಕ ತೀರ್ಪಿನ ಬಗ್ಗೆ ಅಸಮಾಧಾನ!

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship final) ಪಂದ್ಯದಲ್ಲಿ ಟೀಂ ಇಂಡಿಯಾ (Team India) 40 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಗೆಲುವಿಗೆ ಇನ್ನೂ 280 ರನ್​ಗಳ ಅಗತ್ಯವಿದೆ.

ಈ ನಡುವೆ ಶುಭ್​ಮನ್ ಗಿಲ್ ಅವರ ಔಟ್ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಅಂಪೈರ್‌ನ ಈ ನಿರ್ಧಾರಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ವಿವಾದಾತ್ಮಕ ರೀತಿಯಲ್ಲಿ ಹೊರಬಂದ ನಂತರ ಶುಭ್​ಮನ್ ಗಿಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ವಿಕೆಟ್ ಬಗ್ಗೆ ಟ್ವೀಟರ್ ಹಾಗೂ ಇನ್ಸ್​ಟಾಗ್ರಾಂನಲ್ಲಿ ಗಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಖಾತೆಗಳಲ್ಲಿ ಗಿಲ್, ಕ್ಯಾಮರೂನ್ ಗ್ರೀನ್ ಕ್ಯಾಚ್ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಒಂದರಲ್ಲಿ ಚಪ್ಪಾಳೆ ತಟ್ಟುವ ಎಮೋಜಿಯನ್ನು ಹಾಕಿದ್ದರೆ, ಟ್ವಿಟರ್​ನಲ್ಲಿ ಬೂತಗನ್ನಡಿ ಎಮೋಜಿಯನ್ನು ಹಾಕಿದ್ದಾರೆ.

ಸ್ಕಾಟ್ ಬೋಲ್ಯಾಂಡ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನ ಎಂಟನೇ ಓವರ್ ಬೌಲ್ ಮಾಡಿದರು. ಈ ಓವರ್​ ಎದುರಿಸಿದ ಗಿಲ್, ಬೋಲ್ಯಾಂಡ್ ಅವರ ಮೊದಲ ಎಸೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್​ನ ಅಂಚಿಗೆ ತಾಗಿ ಗಲ್ಲಿ ಬಳಿ ನಿಂತಿದ್ದ ಕ್ಯಾಮರೂನ್ ಗ್ರೀನ್ ಕಡೆಗೆ ಹೋಯಿತು. ಗ್ರೀನ್ ಡೈವ್ ಬಿದ್ದು ಕ್ಯಾಚ್ ತೆಗೆದುಕೊಂಡರು. ಆದರೆ ಗ್ರೀನ್ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಅಂಪೈರ್ ಗಿಲ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ನೆಟ್ಟಿಗರು ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!