September 6, 2026
Sunday, September 6, 2026
spot_img

ಇಂಧನ ಬೆಲೆ ಏರಿಕೆ ಜನವಿರೋಧಿ ಕ್ರಮ, ನರೇಂದ್ರ ಮೋದಿ ರಾಜೀನಾಮೆ ಕೊಡ್ಬೇಕು: ಸಿಎಂ ಸಿದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಯನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಒಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಜನವಿರೋಧಿ ನಡೆ ತೋರಿರುವ ಕೇಂದ್ರ ಸರ್ಕಾರ, ಬಡವರ ಬಗ್ಗೆ ಆಲೋಚಿಸಿಲ್ಲ. ಜನರಿಗೆ ವಿರೋಧವಾಗಿರುವ ಈ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟುಕೊಡಬೇಕು ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 106 ರೂಪಾಯಿ ಮತ್ತು ಡೀಸೆಲ್ ಬೆಲೆ ಸುಮಾರು 94 ರೂಪಾಯಿ. ನಿತ್ಯವೂ ಗಾಡಿಯಲ್ಲೇ ಕೆಲಸಕ್ಕೆ ಹೋಗೋರು, ಗಾಡಿಯಲ್ಲೇ ಕೆಲಸ ಮಾಡೋರು, ಗಿಗ್‌ ವರ್ಕರ್ಸ್‌ ಏನು ಮಾಡಬೇಕು? ಎಷ್ಟೂ ಎಂದು ಗಾಡಿಗೆ ಪೆಟ್ರೋಲ್‌ ಸುರಿಯಬೇಕು? ದರ ಕಡಿಮೆ ಮಾಡಿ ಎಂದು ಸಿಎಂ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !