September 30, 2026
Wednesday, September 30, 2026
spot_img

ಸಿದ್ದರಾಮಯ್ಯ ಈಗ ಹೌದು ಹುಲಿಯಾ ಅಲ್ಲ, ಹೌದು ಇಲಿಯಾ: ಆರ್‌. ಅಶೋಕ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಸಿದ್ದರಾಮಯ್ಯ ಈಗ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವ್ಯಂಗ್ಯ ಮಾಡಿದ್ದಾರೆ.

ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಸಿದ ಆರ್ ಅಶೋಕ್, ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ್ರು. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ʻಹೌದು ಹುಲಿಯಾ ಆಗಿ ಅವ್ರು ಉಳಿದಿಲ್ಲ, ಹೌದು ಇಲಿಯಾʼ ಆಗಿದ್ದಾರೆ.

ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡ್ತಿದೆ. ಆದರೆ ಸಿದ್ದರಾಮಯ್ಯ ಹುಲಿ ಥರ ಘರ್ಜನೆ ಮಾಡೋದು ಬಿಟ್ಟು ಇಲಿ ಥರ ಸುಮ್ಮನೆ ಕೂತಿದ್ದಾರೆ ಎಂದಿದ್ದಾರೆ.

Must Read