ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆಲ್ಲಾ ಸಿದ್ದರಾಮಯ್ಯನವರೇ ಕಾರಣ: ಪ್ರತಾಪ್‌ ಸಿಂಹ

ಹೊಸದಿಗಂತ ವರದಿ, ಮೈಸೂರು:

ರಾಜ್ಯದಲ್ಲಿ ಈಗ ನಡೆಯುತ್ತಿರುವ ಅಹಿತಕರ ಘಟನೆಗಳಿಗೆಲ್ಲಾ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾರಣ ಎಂದು ಬಿಜೆಪಿ ಸಂಸದ ಪ್ರತಾಪ್‌ಸಿಂಹ ಆರೋಪಿಸಿದರು.
ಶನಿವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ನ್ಯಾಯಾಲಯ ತೀರ್ಪು ನೀಡಿದಾಗ ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪಿನ ವಿರುದ್ಧ ಯಾವುದೇ ರೀತಿಯಲ್ಲಿ ಪ್ರತಿಭಟನೆ ಮಾಡಬೇಡಿ ಎಂದಿದ್ದರೆ, ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಶಿಕ್ಷಣ ಮುಖ್ಯ ಪ್ರತಿಭಟಿಸಬೇಡಿ ಎಂದಿದ್ದರೆ ಹೀಗೆ ಆಗುತ್ತಿರಲಿಲ್ಲ. ಹಿಂದುಗಳು ಕೇವಲ ಪ್ರತಿಕ್ರಿಯಿಸುತ್ತಾರೆ. ಆದರೆ ಅವರು ಎಲ್ಲದಕ್ಕೂ ದಾಳಿ ಮಾಡುತ್ತಾರೆ. ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಜಿಹಾದಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸುವವರೆಗೂ ರಾಜ್ಯದಲ್ಲಿ ಈಗ ನಡೆಯುತ್ತಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಜಿಹಾದಿಗಳಿಗೆ ಬೆಂಬಲ ವ್ಯಕ್ತಪಡಿಸಿ ತಾವು ಅಧಿಕಾರಕ್ಕೆ ಬರಬಹುದು ಎಂದು ಸಿದ್ದರಾಮಯ್ಯ ಅಂದುಕೊAಡಿದ್ದಾರೆ. ಆದರೆ ಅದು ಆಗುವುದಿಲ್ಲ ಎಂದರು.
ಜಿಹಾದಿ ಮನಸ್ಥಿತಿ ಪ್ರೋತ್ಸಾಹಿಸೋದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಲ್ಲಿಸಬೇಕು. ಹಿಂದೂ-ಮುಸ್ಲಿA ವಿಚಾರದಲ್ಲಿ ಚಿತಾವಣೆ ಮಾಡುವುದು ಬಿಡಬೇಕು ಎಂದು ಆಗ್ರಹಿಸಿದರು.
ಕೋಲಾರದಲ್ಲಿ ಶೋಭಾ ಯಾತ್ರೆ ಮೇಲೆ ಕಲ್ಲು ತೂರಾಟ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಿಯವರೆಗೆ ಅವರು ಗಲಾಟೆ ಮಾಡುವುದನ್ನು ನಿಲ್ಲಿಸೋದಿಲ್ವೋ ಅಲ್ಲಿಯವರೆಗೂ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ. ರಾಜಕೀಯಕ್ಕಾಗಿ ಹೀಗೆ ಪ್ರೋತ್ಸಾಹಿಸಿದರೆ ಭಾರತ ಮತ್ತೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ರೀತಿ ಪ್ರತ್ಯೇಕ ಆಗುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಅವರೇ ಅಧಿಕಾರಕ್ಕಾಗಿ ಕರ್ನಾಟಕ ಶಾಂತಿ ಹಾಳು ಮಾಡಬೇಡಿ. ಮೈಸೂರು ಮಹಾರಾಜರಿಗೆ ಉಪಕೃತರಾಗಬೇಕಾದ ನೀವು ಅದನ್ನ ಮರೆತಿದ್ದೀರಿ. ಟಿಪುö್ಪ ಜಯಂತಿ ಮಾಡಿ ಹತ್ತಾರು ಕೊಲೆಗಳಿಗೆ ದಾರಿ ಮಾಡಿಕೊಟ್ರಿ. ನಿಮ್ಮ ಶಾಸಕ ತನ್ವೀರ್ ಸೇಠ್ ಕುತ್ತಿಗೆ ಕಡಿದಿದ್ದನ್ನೂ ನೋಡಿದ್ದೇವೆ. ಸಾಕಷ್ಟು ಹಿಂದೂ ಕಾರ್ಯಕರ್ತರ ಹತ್ಯೆಗಳು ಆಗಿವೆ ಎಂದು ಹೇಳಿದರು. ನಿಮಗೆ ಅಧಿಕಾರ ಶಾಶ್ವತ ಅಲ್ಲ. ಅಧಿಕಾರಕ್ಕಾಗಿ ಶಾಶ್ವತವಾಗಿ ಇರಬೇಕಾದ ಭಾರತವನ್ನ ಹಾಳು ಮಾಡಬೇಡಿ. 2015ರಲ್ಲಿ ಎಸ್‌ಡಿಪಿಐ, ಕೆಎಫ್‌ಡಿ ಮೇಲಿನ ಪ್ರಕರಣಗಳನ್ನು ವಾಪಸ್ ತೆಗೆದ್ರು. ಕ್ರಿಮಿನಲ್‌ಗಳನ್ನು ರಾಜಾರೋಷವಾಗಿ ಓಡಾಡಲು ಬಿಟ್ಟರು. ಆಗಿನಿಂದಲೂ ಸರಣಿ ಹತ್ಯೆಗಳಾದವು. ಟಿಪುö್ಪ ಜಯಂತಿ ಮಾಡಿ ತಾಲಿಬಾನಿ ಮನಸ್ಥಿತಿಗಳಿಗೆ ಪ್ರೋತ್ಸಾಹ ಕೊಟ್ರು. 2023ರಲ್ಲಿ ಮತ್ತೆ ಅಧಿಕಾರ ಸಿಕ್ಕರೆ ಇದೇ ಮನಸ್ಥಿತಿಗಳಿಗೆ ಅವಕಾಶ ಆಗುತ್ತೆ ಅಂದುಕೊAಡಿದ್ದಾರೆ. ಅದಕ್ಕಾಗಿ ಇವರು ಈಗಲೂ ಪ್ರೋತ್ಸಾಹ ನೀಡ್ತಿದ್ದಾರೆ ಹಾಗೂ ಅವರೂ ಹಾಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಹಿಜಾಬ್ ವಿಚಾರದಲ್ಲಿ ನಮ್ಮದು ತಪ್ಪಾಯಿತು ಅಂತ ನ್ಯಾಯಾಲಯದ ವಿರುದ್ಧ ಹೋದವರು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯ ಈ ರೀತಿ ಚಿತಾವಣೆ ಕೊಡೋದು ನಿಲ್ಲಿಸಬೇಕು. ಅಲ್ಲಿಯವರೆಗೂ ಇಂತಹ ಅಭಿಯಾನಗಳು ನಿಲ್ಲುವುದಿಲ್ಲ ಎಂದು ಹೇಳಿದರು. ಅಭಿಯಾನ ಪ್ರಶ್ನೆ ಮಾಡುವ ಬದಲು ಇದಕ್ಕೆ ಕಾರಣ ಯಾರು ಅನ್ನೋದು ತಿಳಿದುಕೊಳ್ಳಬೇಕು. ಹಿಜಾಬ್ ಸಮಸ್ಯೆ ಬಂದಾಗಲೇ ಮಕ್ಕಳಿಗೆ ಶಾಲೆಗೆ ಹೋಗುವಂತೆ ಸಿದ್ದರಾಮಯ್ಯ ಬುದ್ಧಿ ಹೇಳಬೇಕಿತ್ತು. ಆಗ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಹಿಂದೂಗಳು ಯಾವತ್ತೂ ಈ ರೀತಿ ವಿಚಾರ ಕೈಗೆತ್ತಿಕೊಂಡಿರಲಿಲ್ಲ ಎಂದು ತಮ್ಮ ಪಕ್ಷ ಮತ್ತು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಹೈಕೋರ್ಟ್ಗೆ ಮುಸ್ಲಿಮರು ಬೆಲೆ ಕೊಡಲಿಲ್ಲ. ಅದಕ್ಕಾಗಿ ಈ ರಿಯಾಕ್ಷನ್ ಆಗಿದೆ. ಹಿಂದೂಸ್ ನೆವರ್ ಆಕ್ಟ್, ಓನ್ಲಿ ರಿಯಾಕ್ಟ್- ಹಿಂದೂಗಳು ಯಾರ ಮೇಲೂ ಆಕ್ರಮಣ ಮಾಡಿಲ್ಲ. ಒಂದೇ ಒಂದು ಹಿಂಸಾಚಾರ ಕೂಡ ಮಾಡಿಲ್ಲ. ಕಿಡಿ ಹಚ್ಚುವ ಕೆಲಸ ಯಾರು ಮಾಡಿದರೂ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಮುಸ್ಲಿಮರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಜಾಬ್ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ನಡೆದುಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!