ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ಬಾಸ್ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ನಿರ್ಧಾರ ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು, ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ಬಾಸ್. ಭಾರತಕ್ಕೆ ಅಪಮಾನ ಮಾಡುವ ಕೆಲಸ ಮಾಡ್ತಿರೋರೇ ಹೆಚ್ಚು. ಇವರು ಸಿಎಂ ಸ್ಥಾನದಲ್ಲಿ ಕೂತು ಕಾನೂನು ಕಾಪಾಡುವ ಕೆಲಸ ಮಾಡ್ತಿಲ್ಲ. ಮುಸಲ್ಮಾನರ ಓಲೈಕೆಯಿಂದ ಅಧಿಕಾರದಲ್ಲಿ ಉಳ್ಕೋತಾರೆ ಅನ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.