ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಅವರನ್ನು ಮೂಲ ಕಾಂಗ್ರೆಸ್ ಸದಸ್ಯರೇ ಬಲಿಪಶು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೈಲಹೊಂಗಲದಲ್ಲಿ ಭಾಷಣ ಮಾಡಿದ ಅವರು, ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಬಲಿಪಶು ಮಾಡಿದೆ. ಬಹಳ ದಿನಗಳ ಹಿಂದೆ ಈ ಪ್ರಕರಣವನ್ನು ಬಗೆಹರಿಸಿದ ಕಾಂಗ್ರೆಸ್ಸಿಗರು. ಬಿಜೆಪಿಯ ಸಮರ್ಥ ಹೋರಾಟದಿಂದಾಗಿ ವಿಷಯ ಈ ಹಂತಕ್ಕೆ ತಲುಪಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ನಡೆಸಲಿ ಅಥವಾ ರಾಜೀನಾಮೆ ನೀಡಲಿ. ನ್ಯಾಯಾಲಯದ ತೀರ್ಪಿನ ನಂತರ ರಾಜ್ಯದ ಜನತೆ ನಿಮ್ಮ ಮಾತನ್ನು ಒಪ್ಪುವುದಿಲ್ಲ. ಬೇರೆಯವರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ನಿಮ್ಮಷ್ಟು ಅಧಿಕಾರ ರಾಜ್ಯದಲ್ಲಿ ಯಾರಿಗೂ ಇಲ್ಲ. ಹಿಂದೂ ವಿರೋಧಿ ಧೋರಣೆ ಕೈಬಿಡುವಂತೆ ಯತ್ನಾಳ್ ಸಲಹೆ ನೀಡಿದ್ದು, ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.