ದೇವರ ಮೊರೆ ಹೋದ ಸಿದ್ದರಾಮಯ್ಯ: ಕೆಲಸ ಮಾಡುವ ಪಕ್ಷಕ್ಕೆ ಮತ ನೀಡುವಂತೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತದಾನಕ್ಕೂ ಮೊದಲೂ ವರುಣಾ ಕ್ಷೇತ್ರದ ಈಶ್ವರನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕೆಲಸ ಮಾಡುವ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ವಿನಂತಿಸಿದರು. ಈ ಚುನಾವಣೆಯಲ್ಲಿ ಈ ದೇಶದ ಭವಿಷ್ಯವೂ ಸೇರಿಕೊಂಡಿದೆ ಎಂದು ಕರ್ನಾಟಕದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ 130 ಸೀಟುಗಳನ್ನು ಪಡೆಯುತ್ತದೆ, ಅದು 150 ಸ್ಥಾನಗಳಿಗೆ ಏರಬಹುದು ಎಂದು ನಾನು ನಿರಂತರವಾಗಿ ಹೇಳುತ್ತಲೇ ಇದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!