ದಿಗಂತ ವರದಿ ವಿಜಯಪುರ:
ನಡೆದಾಡುವ ದೇವರಾದ ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಯುವಕರೊಂದಿಗೆ ಚೆಂಡಿನಾಟವಾಡಿ ಸಂಭ್ರಮಿಸಿದ ವಿಡಿಯೋ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮ ಹಿನ್ನೆಲೆ ಗುರುದೇವ ಆಶ್ರಮದಲ್ಲಿ ತಂಗಿರುವ ಸಿದ್ಧೇಶ್ವರ ಸ್ವಾಮೀಜಿ, ಪ್ರವಚನದ ಬಿಡುವಿನ ವೇಳೆಯಲ್ಲಿ ಚೆಂಡಿನ ಆಟ ಆಡಿದ್ದಾರೆ. ಸಿದ್ಧೇಶ್ವರ ಸ್ವಾಮೀಜಿ ಯುವಕರೆಡೆಗೆ ಚೆಂಡು ಎಸೆದ ವೇಳೆ ಕ್ಯಾಚ್ ಹಿಡಿದು ಯುವಕರು ಖುಷಿಪಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಶ್ರೀಗಳ ಚಂಡಾಟ ಭಕ್ತರಲ್ಲಿ ಸಂತಸ ಮೂಡಿಸಿದೆ.