IPL ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೀರನ್‌ ಪೊಲಾರ್ಡ್! ಮುಂಬೈ ವಿರುದ್ಧ ಆಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ದಿಗ್ಗಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐದು ಬಾರಿಯ ಐಪಿಎಲ್‌ ಚಾಂಪಿಯನ್ ಆಟಗಾರ ಕೀರಾನ್ ಪೊಲಾರ್ಡ್ ಇಂದು ಇಂಡಿಯನ್ ಪ್ರೀಮಿಯರ್ ಲೀಗ್‌ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಪೊಲಾರ್ಡ್ ಟಿ 20 ದಂತಕಥೆ ಮತ್ತು ಮುಂಬೈ ಇಂಡಿಯನ್ಸ್‌ ಗಾಗಿ ಹಲವಾರು ಅದ್ಭುತ ಇನ್ನಿಂಗ್ಸ್‌ ಗಳನ್ನು ಆಡಿದ ಆಟಗಾರ. ಕೆಲತಿಂಗಳ ಹಿಂದೆ ವೆಸ್ಟ್ ಇಂಡಿಯನ್ ತಂಡಕ್ಕೆ ವಿದಾಯ ಹೇಳಿದ್ದ ಪೊಲಾರ್ಡ್‌ ಇದೀಗ ತನ್ನ ಸುಧೀರ್ಘ IPL ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಪೊಲಾರ್ಡ್ 2009 ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡಿದ್ದರು. ಪೊಲಾರ್ಡ್‌- ಮುಂಬೈ ಬಾಂದವ್ಯ ಅತ್ಯುತ್ತಮವಾಗಿತ್ತು. ಅವರು ಅದೇ ಪ್ರಾಂಚೈಸಿಯ ಜೊತೆಗೆ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಕಳೆದ ಆವೃತ್ತಿಯಲ್ಲಿ ಮಂಕಾಗಿದ್ದ ಪೊಲಾರ್ಡ್‌ ರನ್ನು ಈ ಬಾರಿ ಪ್ರಾಂಚೈಸಿ ಬಿಡುಗಡೆ ಮಾಡಲು ಮುದಾಗಿತ್ತು. ಈ ಬೆನ್ನಲ್ಲೇ ಪೊಲಾರ್ಡ್‌ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ.

ಪೊಲಾರ್ಡ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಮಾಡಿದ್ದು “ನಾನು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ ಆಡುವ ಉದ್ದೇಶ ಹೊಂದಿದ್ದೆ. ಆದ್ದರಿಂದ ಇದು ಸುಲಭವಾದ ನಿರ್ಧಾರವಲ್ಲ. ಆದಾಗ್ಯೂ, ಮುಂಬೈ ಇಂಡಿಯನ್ಸ್ ಜೊತೆಗಿನ ಚರ್ಚೆಯ ಬಳಿಕ ನಾನು ಈ ನಿರ್ಧಾರವನ್ನು ಕೈಗೊಂಡೆ. ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಪರ 13 ಸೀಸನ್‌ಗಳಲ್ಲಿ ತಂಡದ ಭಾಗವಾಗಿದ್ದು ನನ್ನ ಪಾಲಿಗೆ ಗೌರವ ಹಾಗೂ ಆಶೀರ್ವಾದವಾಗಿತ್ತು. ಮೈದಾನದ ಒಳಗೆ ಮತ್ತು ಹೊರಗೆ ನಾನು ಯಾವಾಗಲೂ ಬೇಷರತ್ತಾದ ಪ್ರೀತಿಯನ್ನು ಅನುಭವಿಸಿದ್ದೇನೆ. ನನ್ನ ಐಪಿಎಲ್ ವೃತ್ತಿಜೀವನದಲ್ಲಿ ಎಲ್ಲವನ್ನೂ ನೀಡಿರುವ ಈ ಅದ್ಭುತ ಫ್ರಾಂಚೈಸಿಗೆ ಈಗ ಬದಲಾವಣೆಯ ಅಗತ್ಯವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು.  ನಾನು ಮತ್ತೊಂದು ಪ್ರಾಂಚೈಸಿ ಸೇರಿ ಮುಂಬೈ ವಿರುದ್ಧವೇ ಆಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಅಜೀವಪರ್ಯಂತ ಮುಂಬೈ ಆಟಗಾರನಾಗೇ ಉಳಿಯುತ್ತೇನೆ ಎಂದು ಮಾರ್ಮಿಕವಾಗಿ ಬರೆದುಕೊಂಡಿರುವ ಪೊಲಾರ್ಡ್‌, ತಾವು ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.
ಐಪಿಎಲ್ ನಿವೃತ್ತಿಯ ನಂತರ ನಾನೀಗ ಮುಂಬೈ ಬ್ಯಾಟಿಂಗ್ ಕೋಚ್ ಪಾತ್ರ ವಹಿಸಿಕೊಂಡಿದ್ದೇನೆ. ಆದ್ದರಿಂದ ಮುಂಬೈ ಇಂಡಿಯನ್ಸ್‌ನೊಂದಿಗಿನ ನನ್ನ ಪ್ರಯಾಣ ಮುಂದುವರಿಯುತ್ತದೆ ಎಂದು ಪೊಲಾರ್ಡ್ ಬಹಿರಂಗಪಡಿಸಿದ್ದಾರೆ. ಜೊತೆಗೆ ವೆಸ್ಟ್ ಇಂಡಿಯನ್ ಎಂಐ ಎಮಿರೇಟ್ಸ್ ತಂಡದಲ್ಲಿ ಆಡುವ ಬಗ್ಗೆಯೂ ಬಹಿರಂಗಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!