ಕೆನಡಾದ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿ ಸಿಧು ಮೂಸೆವಲಾ ಹತ್ಯೆಯ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆನಡಾದ 25 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್ ಗೋಲ್ಡಿ ಬ್ರಾರ್ (Goldy Brar) ಹೆಸರಿದೆ.

ಇಂಟರ್ ಪೋಲ್ ಒಟ್ಟಾವಾದ ಫ್ಯುಜಿಟಿವ್ ಅಪ್ರೆಹೆನ್ಶನ್ ಸಪೋರ್ಟ್ ಟೀಮ್ (FAST) ಪರಾರಿಯಾಗಿರುವ ಸತಿಂದರ್ ಜಿತ್ ಸಿಂಗ್ ಗೋಲ್ಡಿ ಬ್ರಾರ್ ಅನ್ನು ಮೇ 01, 2023 ರಂದು BOLO ಕಾರ್ಯಕ್ರಮದಡಿಯಲ್ಲಿ 25 ಮೋಸ್ಟ್ ವಾಂಟೆಡ್ ಪ್ಯುಜಿಟಿವ್‌ಗಳ ಪಟ್ಟಿಯಲ್ಲಿ ಸೇರಿಸಿದೆ ಎಂದುದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಮಂಗಳವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಮೂಸೆವಾಲಾ ಹತ್ಯೆಯಲ್ಲಿ ಬ್ರಾರ್ ಪಾತ್ರ ಬಗ್ಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ತನಿಖೆ ನಡೆಸುತ್ತಿದೆ.ಭಾರತದಲ್ಲಿ ಮಾಡಿದ ಅಪರಾಧಗಳು ಬಹಳ ಗಂಭೀರವಾಗಿದೆ ಮತ್ತು ಕೆನಡಾದ ಪೊಲೀಸರು ಇದರ ತನಿಖೆ ನಡೆಸುತ್ತಾರೆ ಎಂದು ಹೇಳಿದೆ.

ಕೆನಡಾದಲ್ಲಿದ್ದಾರೆ ಎಂದು ನಂಬಲಾದ ಬ್ರಾರ್, ರಜತ್ ಕುಮಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಗುರ್ಲಾಲ್ ಸಿಂಗ್ ಮತ್ತು ಮೂಸೆವಾಲಾ ಹತ್ಯೆಗೆ ಯೋಜನೆ ರೂಪಿಸಿದ ಆರೋಪ ಹೊತ್ತಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜಹಾವರ್ಕೆ ಗ್ರಾಮದಲ್ಲಿ ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಬ್ರಾರ್ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಅಕ್ರಮ ಬಂದೂಕುಗಳ ಪೂರೈಕೆ ಮತ್ತು ಇಂಟರ್‌ಪೋಲ್ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಜೂನ್ 2022 ರಲ್ಲಿ, ಭಾರತವು ಬ್ರಾರ್‌ಗಾಗಿ ಇಂಟರ್‌ಪೋಲ್ ರೆಡ್ ನೋಟಿಸ್ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!