ಹೊಸದಿಗಂತ ವರದಿ,ಮಂಡ್ಯ:
ತಾಲ್ಲೂಕಿನ ಕನ್ನಲಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಶನಿವಾರ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿದ್ದ ಮೂರು ಚಿರತೆ ಮರಿಯಲ್ಲಿ ಒಂದು ಚಿರತೆ ಮರಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು. ಇನ್ನೆರಡು ಮರಿಗಳನ್ನ ಕಚ್ಚಿಕೊಂಡಿರುವ ತಾಯಿ ಚಿರತೆ ಕಬ್ಬಿನ ಗದ್ದೆಯಲ್ಲೇ ಇದೆ.
ಬೋರಾಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನಿನ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುರುತ್ತಿರುವ ವೇಳೆ ಚಿರತೆ ಮರಿಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.
ಕೆಲವು ಗ್ರಾಮ ಯುವಕರು ಚಿರತೆ ಮರಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡ ಎಂಜಾಯ್ ಮಾಡಿದರೆ, ಕೆಲವರು ಚಿರತೆ ನೋಡಿ ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿನೀಡಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.