ಸೂಚಕರ ಖೊಟ್ಟಿ ಸಹಿ : ಪಕ್ಷೇತರ ಅಭ್ಯರ್ಥಿ ಮೇಲೆ ದೂರು ದಾಖಲು

ದಿಗಂತ ವರದಿ ಹಾವೇರಿ:

ಭಾರತ ಚುನಾವಣಾ ಆಯೋಗದ ಮಾಗ೯ಸೂಚಿಯಂತೆ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಲು 10 ಜನ ಸೂಚಕರ ಬೇಕು. ಈ ಸೂಚಕರು ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರದವರಾಗಿರಬೇಕು. ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ , ಕ್ರಮಸಂಖ್ಯೆ ಕ್ರಮಬದ್ದವಾಗಿ ನಮೂದಿಸಿ ಖದ್ದಾಗಿ ಸೂಚಕರೇ ಸಹಿ ಮಾಡಿರಬೇಕು.

ಆದರೆ ನಾಮಪತ್ರ ಸಲ್ಲಿಕೆ ವೇಳೆ ಸೂಚಕರ ಖೊಟ್ಟಿ ಸಹಿ ಮಾಡಿ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಎಂಬುವರು ಸಲ್ಲಿಸಿದ ನಾಮಪತ್ರ ಬಗ್ಗೆ ಸಂಶಯ ಬಂದ ಕಾರಣ ತಹಶೀಲ್ದಾರ್ ತನಿಖೆ ನಡೆಸಿದ್ದರು.

ತನಿಖೆ ವೇಳೆ ಸೂಚಕರ ಖೊಟ್ಟಿ ಸಹಿ ರುಜುವಾತಾದ ಕಾರಣ ಪಕ್ಷೇತರ ಅಭ್ಯರ್ಥಿ ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಎಂಬುವರು ಮೇಲೆ ದೂರು ದಾಖಲು
ಮಾಡಲು RO @ dc ಅವರಲ್ಲಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!