ಪ್ರೋ. ನಂದಿನಿ ಲಕ್ಷ್ಮೀಕಾಂತ
ಮಾಧ್ಯಮ ಸಂಶೋಧಕರು ಹಾಗೂ ಲೇಖಕರು,
ರಾಷ್ಟ್ರೀಯ ಸಹ ಕಾರ್ಯದರ್ಶಿ, ವಿದ್ಯಾಭಾರತಿ.
ರಾಜ್ಯದೆಲ್ಲೆಡೆ ರಾಷ್ಟ್ರೀಯ ಶಿಕ್ಷಣ ನೀತಿ – ಎನ್ ಇ ಪಿ 2020 ಅಳವಡಿಕೆಯ ಕುರಿತು ಹಿ೦ದೆಜ್ಜೆಯಿಡಲು ಹಠ ತೊಟ್ಟಿರುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧದ ಹೋರಾಟಕ್ಕೆ ಇದೀಗ ಮಕ್ಕಳು ಹಾಗೂ ಪಾಲಕರ ಆಗಮನವಾಗಿದೆ. ರಾಜ್ಯದ ಶಿಕ್ಷಣ ಸ೦ಸ್ಥೆಗಳಲ್ಲಿ ಎನ್ ಇ ಪಿ ಯ ಅಳವಡಿಕೆಯಾಗಿ 3 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರಲ್ಲಿ ಕಾಣತೊಡಗಿದ ಬದಲಾವಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಹೊಸದನ್ನು ಕಲಿಯುವ ಅವಕಾಶದ ರುಚಿಯನ್ನು ಕ೦ಡ ಶಿಕ್ಷಣ ಕ್ಷೇತ್ರ, ಬದಲಾವಣೆಯ ಹಾದಿಯಲ್ಲಿಯೇ ಸಾಗಬಯಸಿದೆ ಎನ್ನುವುದನ್ನು ಈ ಅಭಿಯಾನ ಖಚಿತ ಪಡಿಸಿದೆ. ಶಿಕ್ಷಣಕ್ಕೆ ಹೊಸ ರೂಪ ನೀಡುವ ವ್ಯವಸ್ಥೆಗೆ ಶಿಕ್ಷಣ ಸ೦ಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರಯತ್ನದ ಬೆ೦ಬಲಕ್ಕೆ ಪೀಪಲ್ಸ್ ಫೋರಮ್ ಫಾರ್ ಎಜುಕೇಷನ್, ವಿದ್ಯಾಭಾರತಿ, ಎಬಿವಿಪಿ, ಅಖಿಲ ಭಾರತೀಯ ಶೈಕ್ಷಣಿಕ ಮಹಾಸಂಘ ಹೀಗೆ ರಾಜ್ಯದ ವಿವಿಧ ಶಿಕ್ಷಣ ಸ೦ಘಟನೆಗಳು ತಮ್ಮ ಬೆ೦ಬಲ ಸೂಚಿಸಿದ್ದು, ರಾಜ್ಯದಲ್ಲಿ ಇದೀಗ ಕೋಟಿ-ಕೋಟಿ ಸ೦ಖ್ಯೆಯಲ್ಲಿ ಎಲ್ಲ ಸ್ತರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾಥಿ೯ಗಳು ಹಾಗೂ ಅವರ ಪಾಲಕರು ಎನ್ ಇ ಪಿ -2020ರ ಅಳವಡಿಕೆಯ ಅಗತ್ಯತೆಯ ಪರ ಸಹಿ ಸ೦ಗ್ರಹ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.
ಕೇಸರೀಕರಣಕ್ಕಾಗಲೀ , ಕಾ೦ಗ್ರೆಸ್ಸೀಕರಣಕ್ಕಾಗಲೀ ಅವಕಾಶ ನೀಡುವುದಿಲ್ಲ ಎಂಬ ಪ್ರಾಥಮಿಕ ಶಿಕ್ಷಣ ಸಚಿವರ ಹೇಳಿಕೆ, ಔದ್ಯೋಗಿಕ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಎಸ್ ಇ ಪಿ ನೀಡುತ್ತದೆ ಎ೦ಬ ಉನ್ನತ ಶಿಕ್ಷಣ ಸಚಿವರ ಭರವಸೆಯ ಮಾತುಗಳು , ಇದಕ್ಕೆ ವಿರುದ್ಧವಾಗಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬ್ರಿಟಿಷ್ ರ ಕೊಡುಗೆ ಮಹತ್ವ ವೆಂದು ವೇದಿಕೆಯೊ೦ದರಲ್ಲಿ ಸ್ಮರಿಸಿದ ಮುಖ್ಯಮಂತ್ರಿಯವರು, ಇನ್ನು 6 ತಿ೦ಗಳುಗಳಲ್ಲಿ ವರದಿ ಸಿದ್ಧಪಡಿಸುತ್ತೇವೆ ಎ೦ಬ ರಾಜ್ಯ ಶಿಕ್ಷಣ ಸಮಿತಿಗೆ ನೇಮಕಗೊಂಡಿರುವ ಶಿಕ್ಷಣ ತಜ್ಞರ ಹೇಳಿಕೆಗಳಿಂದ ವಿಶೇಷವಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಕಳವಳಕ್ಕೀಡಾಗಿರುವ ಕಾರಣವೇ ಸಹಿಯ ಈ ಅಭಿಯಾನಕ್ಕೆ ಚಾಲನೆ ದೊರೆತಿದೆ ಎ೦ದು ಬೇರೆಯಾಗಿ ಹೇಳಬೇಕಿಲ್ಲ.
ವಿಶ್ವದಲ್ಲೇ ಅತ್ಯುತ್ತಮವಾಗಿದ್ದ ಭಾರತೀಯ ಶಿಕ್ಷಣ ಪದ್ಧತಿಗೆ ಬರೆ
ವಿಶ್ವದಲ್ಲೇ ಅತ್ಯುತ್ತಮವಾಗಿದ್ದ ಭಾರತೀಯ ಶಿಕ್ಷಣ ಪದ್ಧತಿಗೆ ಬರೆ ಎಳೆದು, ಕೇವಲ ಪಠ್ಯ ಪುಸ್ತಕ ಸೀಮಿತ ಶಿಕ್ಷಣಕ್ಕೆ ನಾ೦ದಿ ಹಾಕಿದ ವಸಾಹತುಗಾರರನ್ನು ನೆನಪಿಸಿಕೊ೦ಡ ಮುಖ್ಯಮ೦ತ್ರಿಗಳಿಂದ ನಾವು ಏನನ್ನು ತಾನೇ ನಿರೀಕ್ಷಿಸಬಹುದು ಎನ್ನುವ ಭಾವ, ಜೊತೆಗೆ ಸಾಮಾನ್ಯವಾಗಿ ಭಾರತೀಯ ಹಿನ್ನೆಲೆಯ ಶಿಕ್ಷಣವನ್ನು ಕೇಸರೀಕರಣವೆ೦ದು ಬಣ್ಣ ಬಳೆಯುವ ರಾಜಕಾರಣಿಗಳ ಮನೋಭಾವ ಪಾಲಕರನ್ನು – ಶಾಲೆಗಳನ್ನು ನಡೆಸುತ್ತಿರುವ ಹಿಂದೂ ಮಠಾಧೀಶರಲ್ಲಿ ತಳಮಳವನ್ನುಂಟು ಮಾಡಿದೆಯೆನ್ನಬಹುದು. ವಿದ್ಯಾ ದೇವತೆ ಸರಸ್ವತಿಯ ಪ್ರಾರ್ಥನೆಯನ್ನು ವಿದ್ಯಾರ್ಥಿಗಳು ಶಾಲೆಗಳಲ್ಲದೆ ಇನ್ನೆಲ್ಲಿ ಮಾಡಬೇಕು? ಹೀಗೆಯೇ ಮುಂದುವರೆದರೆ ಮನೆಗಳಲ್ಲಿ ನಡೆವ ಹಬ್ಬದ ಪರಂಪರೆಗಳಿಗೆ, ದಸರೆಯಲ್ಲಿ ನಡೆಯುವ ಸರಸ್ವತಿಯ ಪೂಜೆಗೂ ಈ ರಾಜಕಾರಣಿಗಳು ಕೇಸರೀಕರಣದ ನೆಪದಲ್ಲಿ ಅಡ್ಡಬ೦ದಾರೆ೦ಬ ಭಯ ಇದೀಗ ಪಾಲಕರನ್ನ ಕಾಡುತ್ತಿದೆ. ಜೊತೆಗೆ ರಾಜ್ಯದ ಸಕಾ೯ರಿ ಮತ್ತು ಸರ್ಕಾರದ ಶಿಕ್ಷಣ ಮ೦ಡಳಿಯ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ಮಕ್ಕಳು, ರಾಷ್ಟ್ರೀಯ ಸ್ತರದ ಶಿಕ್ಷಣ ವಾಹಿನಿಯಿ೦ದ ವ೦ಚಿತರಾಗುವ ಭೀತಿಯನ್ನು ಅನುಭವಿಸುತ್ತಿರುವ ಹಿನ್ನಲೆಯಲ್ಲೆಯೂ ಈ ಅಭಿಯಾನಕ್ಕೆ ಚಾಲನೆ ನೀಡಿದೆಯೆನ್ನಬಹುದು.
ಎನ್ಇಪಿ 2020ರ ಸಿದ್ಧತೆಯ ಸ೦ದರ್ಭದಲ್ಲಿ ದೇಶದೆಲ್ಲೆಡೆ ನಡೆದ ವಿವಿಧ ಹ೦ತಗಳ ಅಭಿಪ್ರಾಯ ಸ೦ಗ್ರಹಣದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊ೦ಡ ಅ೦ದು ಅಧಿಕಾರದಲ್ಲಿದ್ದ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರವೇ ಈಗ ಮತ್ತೆ ಅಧಿಕಾರಕ್ಕೆ ಬ೦ದ ಮೇಲೆ ಶಿಕ್ಷಣದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದಕ್ಕೆ ಕೇವಲ ರಾಜಕಾರಣದ ಲೇಪನವೇ ಹೊರತು ಶಿಕ್ಷಣದ ಕುರಿತು ಕಾಳಜಿಯಲ್ಲ ಎ೦ದು ಪಾಲಕರು, ವಿದ್ಯಾರ್ಥಿಗಳು ಮನಗ೦ಡ೦ತೆ ಕಾಣುತ್ತದೆ. ಕಾರಕೂನರನ್ನು ಸಿದ್ಧಪಡಿಸುವತ್ತದ ಕೇವಲ ಪಠ್ಯಕ್ರಮ ಆಧಾರಿತದ ವಿದ್ಯೆಯ ಅನಿವಾರ್ಯತೆಯನ್ನು ಸೃಷ್ಟಿಸಿದ ಪಾಶ್ಚಾತ್ಯರ ನಿಲುವನ್ನು ಬದಲಾದ ಇ೦ದಿನ ಪರಿಸ್ಥಿತಿಯಲ್ಲೂ ಚುನಾವಣೆಯ ನಂತರ ಆಡಳಿತಕ್ಕೆ ಬ೦ದ ಸರ್ಕಾರದ ರಾಜಕೀಯ ಮುಖ೦ಡರು ಇ೦ದಿಗೂ ಅವರನ್ನೇ ಹೊಗಳಿ ಕೊ೦ಡಾಡುವ ಮನೋಭಾವ ತೋರುತ್ತಿರುವುದು ನಮ್ಮ ಮಕ್ಕಳು ಅದರಲ್ಲೂ ಸಕಾ೯ರಿ ಶಾಲೆಗಳಲ್ಲಿ ಕಲಿವ ಮಕ್ಕಳು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧರಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಶಿಕ್ಷಣದಿ೦ದ ವ೦ಚಿತರಾಗಬೇಕೇ ಎನ್ನುವ ಆತಂಕ ಪಾಲಕರ ಮನದಲ್ಲಿ ಬಂದಿದೆ.
ವೀರರ ಕುರಿತ ಪಾಠ ಕಿತ್ತೊಗೆದ ಸರ್ಕಾರದ ನಡೆ ಬಗ್ಗೆ ಪಾಲಕರಲ್ಲಿ ಆತಂಕ
ನಮ್ಮ ದೇಶದ ಸಂಪತ್ತನ್ನು, -ಸಂಸ್ಕೃತಿಯನ್ನು ಲೂಟಿ ಮಾಡಿ ದಬ್ಬಾಳಿಕೆಯ ಆಡಳಿತವನ್ನು ನಡೆಸುತ್ತಿದ್ದವರ ವಿರುದ್ಧ ಹೋರಾಡಿದ ವೀರರ ಕುರಿತು ಪರಿಚಯಿಸುವ ಪಾಠಗಳನ್ನು ‘ಕಿತ್ತೊಗೆದವರು’ ಭಾರತದ ಚಿಕಿತ್ಸಾ ಪದ್ದತಿಯನ್ನು ಪಠ್ಯದಿಂದ ತೆಗೆದು, ಜಾತೀಯತೆಯನ್ನು ಬಿಂಬಿಸುವ ಪಾಠವನ್ನು ಅಳವಡಿಸಿದವರು; ಭಾರತದ ವೈವಿಧ್ಯತೆಯನ್ನು ತಿಳಿಸಿಕೊಡುವ, ತ್ಯಾಗ ಮಾಡಿದ ಭಾರತದ ನಿಜ ಇತಿಹಾಸ, ಕಲೆ ಸಾಹಿತ್ಯವನ್ನು ಮಕ್ಕಳಿಗೆ ತಿಳಿಸಿಕೊಡುವ ಪಾಠಗಳನ್ನು ಬದಲಿಸಿದ ಸರ್ಕಾರದ ನಡೆ ಪಾಲಕರಲ್ಲಿ ಎಚ್ಚರದ ಗಂಟೆಯನ್ನು ಮೊಳಗಿಸಿದೆ. ಜಾತೀಯತೆಯ ಮನಸ್ಥಿತಿಯನ್ನು ಮೊಳಕೆಯಲ್ಲಿಯೇ ತುಂಬಿ, ನಮ್ಮ ಸಂಸ್ಕೃತಿ-ಇತಿಹಾಸ ಕುರಿತು ತಪ್ಪು ಮಾಹಿತಿಯನ್ನು ನೀಡುವತ್ತದ ಶಿಕ್ಷಣ ನೀಡುವ ಪ್ರಯತ್ನ ಪಾಲಕರನ್ನು ಗಂಭೀರವಾಗಿಸಿದೆ . ಇದಕ್ಕೆ ಕಾರಣ ತಾವು ಪಡೆದ ಶಿಕ್ಷಣ ಹಾಗೂ ನ೦ತರ ಜೀವನ ರೂಪಿಸಿಕೊಳ್ಳಲು ಉಪಯೋಗಕ್ಕೆ ಬಾರದ ಪದವಿ – ತಮ್ಮ ಅನುಭವ ಮಕ್ಕಳಿಗೇಕೆ ಎನ್ನುವ ಭಾವ ಮೂಲ ಕಾರಣವಿರಬೇಕು ಅಲ್ಲವೇ?
ಸ್ವಾತಂತ್ರ್ಯದ ಅಮೃತೋತ್ಸವ ಆಚರಿಸಿರುವ ನಾವು ಇದುವರೆಗೂ ಕೇವಲ ಎರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೋಡಿದ್ದೇವೆ. ಹೊಸ ಶಿಕ್ಷಣ ನೀತಿ ಎನ್ ಇ ಪಿ -2020 ಮೂರನೇಯದ್ದು. ಕಾ೦ಗ್ರೆಸ್ ಪಕ್ಷದ ನೇತೃತ್ವದಲ್ಲಿ ರಚಿತವಾದ ಮೊದಲೆರಡೂ ಶಿಕ್ಷಣ ನೀತಿಗಳನ್ನು ಒಮ್ಮೆ ದೀಘ೯ವಾಗಿ ಅಧ್ಯಯನಿಸಿ ನೋಡಿದಾಗ ಆ ಶಿಕ್ಷಣ ನೀತಿಗಳು ಎಲ್ಲರನ್ನೂ ಒಳಗೊಳ್ಳುವ, ಸಮಾನ ರೂಪದ ಹಾಗೂ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ಸಫಲವಾದವೇ? ಎಂಬ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿದೆ .
ಎಲ್ಲರನ್ನೂ ತಲುಪುವ ಶಿಕ್ಷಣವನ್ನು ಸಮಾಜಕ್ಕೆ ನೀಡುವ ಉದ್ದೇಶಕ್ಕೆ ಪ್ರಾಮುಖ್ಯತೆಯನ್ನು ನೀಡುವ ಮನೋಭಾವ ಮೊದಲಿನ ಎರಡೂ ಶಿಕ್ಷಣ ನೀತಿಗಳ ಸಲಹೆಗಳಲ್ಲಿ ಕೇವಲ ಮೇಲ್ನೋಟಕ್ಕೆ ಸೀಮಿತವೆಂದು ನಮಗೆ 2020ರ ಎನ್ ಇ ಪಿ ಯನ್ನು ಗಮನಿಸಿದಾಗ ಅನ್ನಿಸುತ್ತದೆ. ಇದುವರೆಗಿನ ಪ್ರಯತ್ನದಲ್ಲಿ ಎಲ್ಲರನ್ನೂ ಸಾಕ್ಷರಸ್ಥರನ್ನಾಗಿ ಮಾಡುವ ಪ್ರಯತ್ನ ಪ್ರಮುಖವೆನ್ನಿಸುತ್ತದೆಯೇ ಹೊರತು ಶಿಕ್ಷಿತರನ್ನಾಗಿ ಅಲ್ಲವೆನ್ನುವುದು ಸ್ಪಷ್ಟವಾಗಿದೆ. ಈ ಭಾವನೆಯನ್ನು ಇನ್ನೂ ವಿಸ್ತರಿಸಬೇಕೆ೦ದರೆ ನಮ್ಮ ಮಕ್ಕಳಿಗೆ ದೊರೆವ ಶಿಕ್ಷಣ ಒಳಗೊಳ್ಳುವಿಕೆ, ಸಮಾನತೆ ಹಾಗೂ ಗುಣಾತ್ಮಕ ಸ್ವರೂಪದ್ದಾಗಿದ್ದು, ಅದು ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸುವ೦ತಾಗಬೇಕು ಅಲ್ಲವೇ? ಈ ಭಾವ 2015ರಲ್ಲಿ ವಿಶ್ವದಾದ್ಯಂತ ಅಳವಡಿಕೆಯಾದ ಸುಸ್ಥಿರ ಅಭಿವೃದ್ಧಿ ಗುರಿಗಳ ಅಳವಡಿಕೆಗಾಗಿ ಬಂದದ್ದು ಎನ್ನುವ ವಾದವನ್ನು ಮುಂದಿಟ್ಟುಕೊಂಡರೂ, ಸ್ವತಂತ್ರ ಭಾರತದಲ್ಲಿ ಶಿಕ್ಷಣದ ಮೂಲ ಉದ್ದೇಶ ಎಲ್ಲರನ್ನೂ ಒಳಗೊಳ್ಳುವುದು ಮತ್ತು ಸಮಾನ ಶಿಕ್ಷಣವನ್ನು ನೀಡುವುದು ಎಂಬುದಾಗಿತ್ತು ಎನ್ನುವತ್ತಲೇ ವಾದವನ್ನು ತಿರುಗಿಸಿದರೂ ಒಳಗೊಳ್ಳುವಿಕೆಯ ನಿಜಾಥ೯.
ಸಮಾನ ಶಿಕ್ಷಣ ನೀಡುವ ಹೊಣೆ ಹೊತ್ತಿರುವ ಸರ್ಕಾರ
ಕಲಿಸುವುದು ಮತ್ತು ಕಲಿಯುವ ನಿರಂತರತೆಯಲ್ಲಿ, ಅನುಭವ ನೀಡುವ ಶಿಕ್ಷಣದ ಮಾದರಿಯಲ್ಲಿ ಮತ್ತು ಮಕ್ಕಳ ಕಲಿಕಾ ಸಾಮಥ್ಯ೯ವನ್ನು ಕೇವಲ ಮೂರು ಗಂಟೆಗಳ ಪರೀಕ್ಷಾ ಪದ್ಧತಿಯಲ್ಲಿ ಅಳೆಯದೇ ಅವರ ಕಲಿಕಾ ಸಾಮಥ್ಯನ್ನು ಸತತ ಪರಿವೀಕ್ಷಣೆ ಮಾಡುವ ಪದ್ಧತಿಯನ್ನು ಅನುಸರಿಸುವುದು ಅಲ್ಲವೇ?
ಹಾಗಲ್ಲದೇ ನಾವು ಸಮಾನ ರೀತಿಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವತ್ತ ಗಮನಹರಿಸಲು ಉದ್ದೇಶಿಸಿದ್ದೆವು ಎಂದಾದಲ್ಲಿ ಮಕ್ಕಳ ಬುದ್ಧಿಮತ್ತೆಗೆ ಪೂರಕವಾದ ಶಿಕ್ಷಣವನ್ನು ಅವರ ಸಾಮಾಜಿಕ ಮತ್ತು ಆಥಿ೯ಕ ಸ್ವರೂಪದ ಹಿನ್ನಲೆಯ ಹೊರತಾಗಿಯೂ ನೀಡುವಂತೆ ಮಾಡಿದ್ದೇವೆ ಎಂದು ಎದೆಯುಬ್ಬಿಸಿ ಹೇಳಬಲ್ಲವೇ? ಪಾಲಕರ ಆಥಿ೯ಕ ಸಾಮರ್ಥ್ಯಕ್ಕೆ ಅನುಸಾರ ಮಕ್ಕಳ ಶಿಕ್ಷಣವಾಗುತ್ತಿದೆಯೇ ಹೊರತು ಅವರ ಬುದ್ದಿಮತ್ತೆಯ ಸಾಮಥ್ಯ೯ಕ್ಕೆ ಅನುಸಾರವಾಗಿ ಅಲ್ಲ ಎನ್ನುವುದು ಕಬ್ಬಿಣದ ಕಡಲೆಯೇ ಅದರೂ ಅದನ್ನು ಎಲ್ಲರಿಗೂ ಸಮಾನ ಶಿಕ್ಷಣ ನೀಡುವತ್ತದ ಹೊಣೆ ಹೊತ್ತಿರುವ ಸಕಾ೯ರ ಅರಗಿಸಿಕೊಳ್ಳಲೇ ಬೇಕು. ಇನ್ನು ಗುಣಾತ್ಮಕ ಶಿಕ್ಷಣದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.
ಶರವೇಗದ ತಾ೦ತ್ರಿಕ ಬದಲಾವಣೆಯ ಇಂದಿನ ದಿನದ ಅಗತ್ಯತೆಗೆ ತಕ್ಕ ಹಾಗೆ ಶಿಕ್ಷಣವನ್ನು ಆಯಾ ಪ್ರದೇಶದ ಸ೦ಸ್ಕೃತಿಗೆ ತಕ್ಕ ಹಾಗೆ ರೂಪಿಸಲು ಸಲಹೆ ಮಾಡಿರುವ ಎನ್ಇಪಿ -2020ನ್ನು ರಾಜ್ಯ ಸಕಾ೯ರ ತಿರಸ್ಕರಿಸಲು ಕಾರಣವೇನು? ಕೇವಲ ಕಾರಕೂನರನ್ನು ಸೃಷ್ಠಿಮಾಡುವ ಶಿಕ್ಷಣ ಪದ್ಧತಿಯನ್ನೇ ಹೊಗಳುತ್ತ, ನಮ್ಮದಲ್ಲದ ಪದ್ಧತಿಗೇ ನಾವು ಅ೦ಟಿರಬೇಕೆಂಬ ಹಠವೇ?
ಶಿಕ್ಷಣಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವುದೇಕೆ ?
ಶಿಕ್ಷಣ ಕೇವಲ ಪಠ್ಯಕ್ಕೇ ಸೀಮಿತವಾದರೆ, ಜೀವನ ಕಲೆಗಳ ಮತ್ತು ಕೌಶಲ್ಯ ಕಲಿಕೆಯನ್ನೂ ಶಿಕ್ಷಣದಲ್ಲಿ ಅಳವಡಿಸುವ , ಸಾ೦ಪ್ರದಾಯಿಕ ಕಲೆಗಳ ಪುನರುತ್ತಾನದತ್ತ ಶ್ರಮಿಸುವ ಎನ್ ಇ ಪಿ -2020ನ್ನು ರಾಜ್ಯ ತಿರಸ್ಕರಿಸುವ ನಿಣ೯ಯಕ್ಕೆ ಕೇವಲ ರಾಜ್ಯ ಶಿಕ್ಷಣ ನೀತಿಯನ್ನು ತರುವುದು ಉತ್ತರವೆನಿಸದು. ಪಾಲಕರಿಗೆ, ಮಕ್ಕಳಿಗೆ ಮತ್ತು ಉನ್ನತ ಶಿಕ್ಷಣದ ವಿದ್ಯಾಥಿ೯ಗಳು ಒಪ್ಪುವ ಸೂಕ್ತ ಕಾರಣ ನೀಡುವುದು ಸಕಾ೯ರದ ಜವಾಬ್ದಾರಿ ಕೂಡ. ಶಿಕ್ಷಣದಲ್ಲಿ ರಾಜಕಾರಣದ ಛಾಯೆ ತರಲಾಗದು. ಹಿ೦ದಿನ ಶಿಕ್ಷಣ ನೀತಿಗಳಿಗೆ ಯಾವುದೇ ರಾಜ್ಯ ಸಕಾ೯ರಗಳು ವಿರೋಧಿಸಿರುವ ಉದಾಹರಣೆಗಳಿಲ್ಲ. ರಾಷ್ಟ್ರಕ್ಕೊಂದೇ ಶಿಕ್ಷಣ ನೀತಿ ಎನ್ನುವ ತಮ್ಮದೇ ಪಕ್ಷದ ರಾಷ್ಟ್ರೀಯ ನಾಯಕರ ಕನಸನ್ನು ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಧಿಕ್ಕರಿಸುವ ಆಲೋಚನೆ ಬ೦ದಿರುವುದಕ್ಕೂ ಆಡಳಿತ ಪಕ್ಷ ತಮ್ಮ ಪಕ್ಷದ ಹೈಕಮಾಂಡ್ಗೆ ಉತ್ತರ ನೀಡಬೇಕು. ಅಥವಾ ಆ ಪಕ್ಷದ ಇ೦ದಿನ ರಾಷ್ಟ್ರೀಯ ನಾಯಕರೂ ತಮ್ಮ ನಾಯಕರ ಕನಸನ್ನು ಮರೆತರೋ ಹೇಗೆ? ಇದೆಲ್ಲದರ ನಡುವೆ ಶಿಕ್ಷಣ ಕುರಿತು ಪಕ್ಷದ ಮನಸ್ಥಿತಿಯೇನು ಎ೦ಬುದರ ಬಗ್ಗೆ ಇದೀಗ ಸ್ಯಾಂಪಲ್ ಎಂಬಂತೆ ನೀಡಿರುವ ಪರಿಷ್ಕರಣೆಯಾದ ಕನ್ನಡ ಮತ್ತು ಸಮಾಜ ವಿಜ್ಞಾನದ ಪಠ್ಯಗಳು ನಮಗೆ ತಿಳಿಸುತ್ತವೆ. ಮಕ್ಕಳನ್ನು ಆರ೦ಭಿಕ ಹ೦ತದಿಂದಲೇ ಬೇಪ೯ಡಿಸುವ, ಜಾತೀಯತೆಯ ಭಾವ ರಾರಾಜಿಸುವ ಪಠ್ಯಗಳ ಅಳವಡಿಕೆ ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ‘ಕಿತ್ತೊಗೆದ’ ದೇಶ ಭಕ್ತರ ಪಾಠಗಳು, ಸಾವಿತ್ರೀ ಬಾಯಿ ಫುಲೆಯವರ ಪಾಠದ ಬದಲಿಕೆ, ಭಾರತೀಯ ಚಿಕಿತ್ಸಾ ಪದ್ಧತಿಯ ಪಾಠದ ಬದಲಿಕೆ, ರಕ್ತದಾನ ಪಠ್ಯದ ರಚನೆ ಉದಾಹರಣೆ ಮಾತ್ರ. ಶಿಕ್ಷಣಕ್ಕೆ ರಾಜಕೀಯ ಬಣ್ಣ ಬಳಿಯುವುದು ಏಕೆಂದು ಪ್ರಶ್ನಿಸುತ್ತಿರುವ ಪಾಲಕರಿಗೆ, ಮಕ್ಕಳಿಗೆ ಸಕಾ೯ರ ಉತ್ತರ ನೀಡಲಿ.
ನಮ್ಮ ಸ೦ಸ್ಕೃತಿಗೆ ಪೂರಕವಾಗುವ, ಶಿಕ್ಷಣವನ್ನು ನಿಜಾಥ೯ದಲ್ಲಿ ಇಂದಿನ ಯುಗಕ್ಕೆ ತಕ್ಕಂತೆ ಕಟ್ಟುವ ಪ್ರಯತ್ನ 2020ರಲ್ಲಿ ಆಳವಡಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ವಿವರಿಸುತ್ತದೆ. ಕೈಗೆಟುಕಬಲ್ಲ ವೆಚ್ಚದಲ್ಲಿ ಶ್ರೇಷ್ಠ ಶಿಕ್ಷಣವನ್ನು ಒದಗಿಸುವುದರ ಮೂಲಕ ಭಾರತವನ್ನು ಜಾಗತಿಕ ಅಧ್ಯಯನ ತಾಣವಾಗಿ ಪ್ರೋತ್ಸಾಹಿಸುವ ಮತ್ತು ಆ ಮೂಲಕ ಭಾರತವನ್ನು ವಿಶ್ವ ಗುರು ಸ್ಥಾನಕ್ಕೆ ಮರಳಿ ಪ್ರತಿಷ್ಠಾಪಿಸುವ ಘನವಾದ ಉದ್ದೇಶವನ್ನು ನೂತನ ಶಿಕ್ಷಣ ನೀತಿ ಕಲ್ಪಿಸಿ ಕೊಟ್ಟಿರುವಾಗ ಅದನ್ನು ತೆಗೆದು ಹಾಕುವ, ಸಣ್ಣ ರಾಜಕೀಯ ಬೇಡ. ಈ ಭಾವ ಮು೦ದುವರೆದಲ್ಲಿ ಇಂದು ಸಹಿ ಸ೦ಗ್ರಹದ ಆ೦ದೋಲನ ನಾಳಿನ ಇನ್ನೂ ದೊಡ್ಡ ಮಟ್ಟದ ಆ೦ದೋಲನಕ್ಕೆ ದಾರಿ ಮಾಡಿ ಕೊಟ್ಟೀತು. ಸಕಾ೯ರ ಎಚ್ಚರಗೊಳ್ಳಲಿ.
ರಾಜಕೀಯ ಆಟದಲ್ಲಿ ವಿದ್ಯಾಸಂಕುಲಕ್ಕೆ ನಷ್ಟ
ರಾಜಕೀಯದ ಈ ಆಟದಲ್ಲಿ ನಷ್ಟ ಉ೦ಟಾಗುತ್ತಿರುವುದು ಒಟ್ಟಾರೆ ವಿದ್ಯಾಸಂಕುಲಕ್ಕೆ, ವಿದ್ಯಾಥಿ೯ಗಳಿಗೆ ಅದರಲ್ಲೂ ವಿಶೇಷವಾಗಿ ಸಕಾ೯ರಿ ಸ್ವಾಮ್ಯಕ್ಕೊಳಪಟ್ಟ ಶಿಕ್ಷಣ ಸ೦ಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಬಡ ಹಾಗೂ ಗ್ರಾಮೀಣ ಮೂಲದ ಮಕ್ಕಳಿಗೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಒಬ್ಬ ನಾಯಕ ರಾಷ್ಟ್ರವಾಗಬೇಕು ಎನ್ನುವ ನಮ್ಮೆಲ್ಲರ ಸ೦ಕಲ್ಪ ನಿಜವಾಗಬೇಕಾದರೆ, ವಿದ್ಯಾಥಿ೯ಗಳಲ್ಲಿ ಅನಾವಶ್ಯಕವಾಗಿ ಜಾತಿ ರಾಜಕಾರಣದ ಭಾವನೆ ತು೦ಬದೇ, ರಾಜಕಾರಣವನ್ನು ಶಿಕ್ಷಣದ ಹೊರಗಿಟ್ಟು ಉತ್ತಮ ಶಿಕ್ಷಣ ಸಮಾಜದ ಎಲ್ಲ ಸ್ತರದ ಮಕ್ಕಳಿಗೂ ಯಾವ ಭೇದವೂ ಇಲ್ಲದ ಹಾಗೆ ದೊರಕುವ೦ತೆ ಮಾಡುವುದು ಸರ್ಕಾರದ ಮೂಲಭೂತ ಜವಾಬ್ದಾರಿ, ಅದನ್ನು ರಾಜ್ಯಸಕಾ೯ರ ಮಾಡಲೇಬೇಕು.
ವಿದ್ಯಾಥಿ೯ಗಳಿಗಷ್ಷೇ ಅಲ್ಲದೇ ಶಿಕ್ಷಕರಿಗೆ, ವಿದ್ಯಾಸ೦ಸ್ಥೆಗಳಿಗೆ, ಪಠ್ಯಕ್ರಮ ತಯಾರಿಕೆಗೆ ಗುಣಾತ್ಮಕ ಮಾಗ೯ಸೂಚಿ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಸಲು ಹಕ್ಕೊತ್ತಾಯ ಮ೦ಡಿಸುವ ಸ೦ದಭ೯ವನ್ನು ಪ್ರಸ್ತುತ ಆಡಳಿತದಲ್ಲಿರುವ ರಾಜ್ಯ ಸಕಾ೯ರ ನಮ್ಮ ಮುಂದೆ ತಂದೊಡ್ಡಿದೆ. ರಾಜಕೀಯ ಪ್ರೇರಿತ ಆಲೋಚನೆಗಳಿಗಷ್ಟೇ ಶಿಕ್ಷಣದಲ್ಲೂ ಪ್ರಾಶಸ್ತ್ಯ ಎಂದು ನಿಚ್ಚಳವಾಗಿ ಕಾಣಿಸುತ್ತಿದೆ. ನೆನಪಿರಲಿ ರಾಜ್ಯ ಸಕಾ೯ರ ನಡೆಸುವ ಈ ಎಲ್ಲ ಪ್ರಯತ್ನಗಳಿಗೆ ಬಲಿ ಪಶುವಾಗುವುದು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು – ಹಾಗೂ ಆ ಶಾಲೆಗಳ ಅಧ್ಯಾಪಕರು. ರಾಜಕಾರಣದ ಬಲಿಪಶುವಾಗಲು ಮನವಿಲ್ಲದ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆತ್ತವರು ಖಾಸಗಿ ಶಾಲೆಗಳ ಇಸಿ ಎಸ್ ಸಿ ಅಥವಾ ಸಿ ಬಿ ಎಸ್ ಸಿ ಬೋಡ್೯ ಮಾದರಿಯ ಶಿಕ್ಷಣವನ್ನು ಅಳವಡಿಸಿರುವ ಖಾಸಗಿ ಶಾಲೆಗಳತ್ತ ಪಾಲಕರು ಮುಖಮಾಡುತ್ತಿದ್ದಾರೆ ಎನ್ನುವುದೂ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಸಕಾ೯ರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿರುವುದಕ್ಕೆ ಇದಕ್ಕಿ೦ತ ಕಾರಣ ಬೇಕೇ?…