ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗುತ್ತಿರುವ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ ಎಂಬ ಕಳವಳಕಾರಿ ಮಾಹಿತಿಯನ್ನು ಐಐಟಿ ಮದ್ರಾಸ್ ನಡೆಸಿದ ಅಧ್ಯಯನ ವರದಿ ಬಹಿರಂಗಪಡಿಸಿದೆ.
2016 ರಲ್ಲಿ ಶೇಕಡಾ 17.2ರಷ್ಟಿದ್ದ ಸಂಖ್ಯೆ, 2021ರಲ್ಲಿ ಶೇಕಡಾ 21.5ಕ್ಕೆ ಏರಿಕೆಯಾಗಿದೆ. 2016ರಲ್ಲಿ ಶೇ.43.1ರಷ್ಟು ಮಹಿಳೆಯರು ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದಾರೆ.
2021 ರಲ್ಲಿ, ಈ ಸಂಖ್ಯೆ ಶೇಕಡಾ 49.7ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದಲ್ಲಿ ನಡೆಯುವ ಸರಾಸರಿ ಎರಡು ಹೆರಿಗೆಗಳಲ್ಲಿ ಒಂದು ಸಿಸೇರಿಯನ್ ಆಗಿದೆ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂದು ವರದಿ ಹೇಳಿದೆ.
2015-16 ಮತ್ತು 2019-21 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.