ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಶಾಸಕತ್ವಕ್ಕೆ ರಾಜೀನಾಮೆ ಕೊಟ್ಟ ಸಿಕ್ಕಿಂ ಸಿಎಂ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ ಅವರು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ .

ಸಿಎಂ ಪತ್ನಿಯ ಹಠಾತ್ ನಿರ್ಧಾರದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಕುಮಾರಿ ಅವರು, ನಾಮ್ಚಿ-ಸಿಂಘಿತಂಗ್ ಕ್ಷೇತ್ರದಿಂದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್(ಎಸ್‌ಡಿಎಫ್) ಅಭ್ಯರ್ಥಿ ಬಿಮಲ್ ರೈ ಅವರನ್ನು ಸೋಲಿಸಿಸಿದ್ದರು.

ಕೃಷ್ಣ ಕುಮಾರಿ ರೈ ಅವರ ರಾಜೀನಾಮೆಯನ್ನು ಸ್ಪೀಕರ್ ಎಂಎನ್ ಶೆರ್ಪಾ ಅಂಗೀಕರಿಸಿದ್ದಾರೆ ಎಂದು ಸಿಕ್ಕಿಂ ವಿಧಾನಸಭೆ ಕಾರ್ಯದರ್ಶಿ ಲಲಿತ್ ಕುಮಾರ್ ಗುರುಂಗ್ ಅವರು ಹೇಳಿದ್ದಾರೆ.

ಈ ಕುರಿತು ಕೃಷ್ಣ ಕುಮಾರ್ ಅಥವಾ ಆಡಳಿತ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ನಾಯಕರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!