ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಿಂ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, ಇದುವರೆಗೆ 26 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಸಿಕ್ಕಿವೆ. ಅಕ್ಟೋಬರ್ 4 ರಂದು, ಉತ್ತರ ಸಿಕ್ಕಿಂನ ಲೋನಕ್ ಸರೋವರದಲ್ಲಿ ಹಠಾತ್ ಮೇಘಸ್ಫೋಟದಿಂದಾಗಿ ಭಾರೀ ಪ್ರಾಣಹಾಣಿ ಉಂಟಾಗಿದೆ. ತೀಸ್ತಾ ನದಿಯಲ್ಲಿ 8 ಸೇನಾ ಚುಂಗ್ತಾಂಗ್ ಅಣೆಕಟ್ಟು ಒಡೆದು, ಜನವಸತಿ ಪ್ರದೇಶ 15-20 ಅಡಿಗಳಷ್ಟು ನೀರಿನಿಂದ ತುಂಬಿತ್ತು.
ತೀಸ್ತಾ ನದಿ ಹರಿಯುವ ಪಶ್ಚಿಮ ಬಂಗಾಳದ ಉತ್ತರ ಭಾಗಗಳಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಿಂಗ್ಟಾಮ್ ಬಳಿಯ ಬುರ್ದಾಂಗ್ ನಲ್ಲಿ ನಿಲ್ಲಿಸಲಾಗಿದ್ದ 39 ವಾಹನಗಳೂ ಕೊಚ್ಚಿ ಹೋಗಿವೆ. ಭಾರತೀಯ ಸೇನೆ ಮತ್ತು ಇತರ ಏಜೆನ್ಸಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.
ಉತ್ತರ ಸಿಕ್ಕಿಂನ ಲಾಚುಂಗ್ ಮತ್ತು ಲಾಚೆನ್ ಕಣಿವೆಗಳಲ್ಲಿ 1500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಉಪಗ್ರಹ ಟರ್ಮಿನಲ್‌ಗಳ ಮೂಲಕ ಆಹಾರ, ವೈದ್ಯಕೀಯ ನೆರವು, ದೂರವಾಣಿ ಸಂಪರ್ಕವನ್ನು ಒದಗಿಸಲಾಗಿದೆ. ಸೇನೆಯು ವಿಶೇಷ ಸಹಾಯವಾಣಿಗಳನ್ನು ಸಹ ಸ್ಥಾಪಿಸಿದೆ.