Wednesday, February 21, 2024

ಹೊಸ ವರ್ಷಾಚರಣೆ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜು: ತಡರಾತ್ರಿವರೆಗೂ ಓಡುತ್ತೆ ನಮ್ಮ ಮೆಟ್ರೋ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ತಡರಾತ್ರಿವರೆಗೂ ಸಂಚರಿಸಲಿದೆ.

ಡಿಸೆಂಬರ್ 31ರಂದು ಇಂದು ರಾತ್ರಿಯಿಂದ ಬೆಳಗಿನ ಜಾವ 2ಗಂಟೆಯವರೆಗೂ ನಮ್ಮ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂ ಆರ್ ಸಿ ಎಲ್ ಮಾಹಿತಿ ನೀಡಿದೆ.

ರಾತ್ರಿ 11ಗಂಟೆಯ ಕೊನೇ ರೈಲನ್ನು ಜ.2ರ ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಟ್ರಿನಿಟಿ ಹಾಗೂ ಕಬ್ಬನ್ ನಿಲ್ದಾಣಗಳವರೆಗೆ ಪ್ರಯಾಣಿಕರಿಗೆ 50 ರೂಪಾಯಿ ಪೇಪರ್ ಟಿಕೆಟ್ ನೀಡಲಾಗುತ್ತದೆ. ಡಿ.31ರಂದು ಟೆಕೆಟ್ ವಿತರಣೆ ಇರುವುದಿಲ್ಲ. ಹೀಗಾಗಿ ಮುಂಚಿತವಾಗಿಯೇ ಟಿಕೆಟ್ ಪಡೆಯಬೇಕು ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.

ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣ ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿರುವುದರಿಂದ ಅಂದು ಹೆಚ್ಚುವರಿ ಅವಧಿಯಲ್ಲಿ ಎಂ.ಜಿ.ರಸ್ತೆಯಿಂದ ಪ್ರಯಾಣ ಬೆಳೆಸುವ ಮೆಟ್ರೊ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳಿಗೆ ತೆರಳಿ ಸಂಚಾರ ಮಾಡಬಹುದು ಎಂದು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!