VIRAL | ಕಿಮೀಗಟ್ಟಲೆ ಟ್ರಾಫಿಕ್‌ಗೆ ಸುಸ್ತಾದ ಸಿಲಿಕಾನ್‌ ಸಿಟಿ ಮಂದಿ ನಡ್ಕೊಂಡು ಹೋಗೋದೆ ಬೆಸ್ಟ್‌ ಅಂದ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ಟ್ರಾಫಿಕ್ ಜಾಮ್ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಮಾತ್ರವಲ್ಲದೇ ಟ್ರಾಫಿಕ್ ಜಾಮ್ ಗೂ ತನ್ನ ಕೊಡುಗೆ ನೀಡುತ್ತಿದೆ.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಸಿಲಿಕಾನ್ ಸಿಟಿಯ ಜನರನ್ನು ಹೈರಾಣಾಗಿಸಿದ್ದು, ಒಂದೆಡೆ ರಸ್ತೆ ಮೇಲೆ ನಿಂತ ನೀರು, ಪ್ರವಾಹ ಜನರನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಕಿಮೀ ಗಟ್ಟಲೆ ಸಂಚಾರ ದಟ್ಟಣೆ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ.

ಅಂತೆಯೇ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಕಿಮೀ ಗಟ್ಟಲೆ ವಾಹನಗಳು ರಸ್ತೆ ಮೇಲೆ ನಿಂತಿದ್ದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

ಇನ್ನು ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಸಾಮಾನ್ಯವಾಗಿಯೇ ಸಂಚಾರ ದಟ್ಟಣೆ ಇರುತ್ತದೆ. ಅಂತಹುದರಲ್ಲಿ ಮಳೆ ಬಂದರೆ ಇಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಬುಧವಾರ ಸಂಜೆ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ಹೀಗಾಗಿ ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ ಒಂದು ಬದಿಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಎಲೆಕ್ಟ್ರಾನಿಸಿಟಿ ಫ್ಲೈಓವರ್‌ನಲ್ಲಿ ಕಳೆದ 1.5 ಗಂಟೆಗಳಿಂದ ಸಂಪೂರ್ಣವಾಗಿ ಜಾಮ್ ಆಗಿದೆ. 5:20 ಕ್ಕೆ ಆಫೀಸ್ ನಿಂದ ಲಾಗ್ ಔಟ್ ಆಗಿದ್ದೇವೆ. ಇಷ್ಟು ಹೊತ್ತಿಗಾಗಲೇ ನಾವು 30 ಕಿಮೀ ದೂರದಲ್ಲಿರುವ ನನ್ನ ಮನೆ ತಲುಪಿರಬೇಕಿತ್ತು. ನಾವು ಇನ್ನೂ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೇವೆ! ವಿವಿಧ ಕಂಪನಿಗಳ ಹೆಚ್ಚಿನ ಉದ್ಯೋಗಿಗಳು ಹತಾಶೆಗೊಂಡು ನಡೆದುಕೊಂಡೇ ಹೋಗುತ್ತಿದ್ದಾರೆ ಎಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!