ವಧು-ವರರಿಗಾಗಿ ತಯಾರಾಗಿವೆ ಬೆಳ್ಳಿ ಚಪ್ಪಲಿಗಳು: ಮುತ್ತು, ರತ್ನಗಳಿಂದ ವಿನ್ಯಾಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳ್ಳಿ-ಬಂಗಾರ ಮೈಮೇಲೆ ಹಾಕೋದಕ್ಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಅಂಥದ್ದರಲ್ಲಿ ಕಾಲಿಗೆ ಧರಿಸುವ ಚಪ್ಪಲಿ ಕೂಡಾ ಬೆಳ್ಳಿಯಲ್ಲಿ ತಯಾರಾಗಿದೆ ಅಂದ್ರೆ ನಂಬುವ ವಿಚಾರಾವಾ? ಹೌದು, ಅಚ್ಚರಿಯಾದರೂ ನಂಬಲೇಬೇಕು. ವಧು ವರನಿಗೆ ಬೆಳ್ಳಿಯ ಚಪ್ಪಲಿ ತಯಾರಾಗಿದೆ. ಅದೂ ಕೂಡ ಮುತ್ತು ರತ್ನಗಳಿಂದ ಅತ್ಯಂತ ಅದ್ಬುತವಾಗಿ ವಿನ್ಯಾಸ ಮಾಡಲಾಗಿದೆ. ವಿವಿಧ ಮಾದರಿಯ ಬೆಳ್ಳಿಯ ಚಪ್ಪಲಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಯುಪಿಯ ಲಕ್ನೋದಲ್ಲಿ ಆಭರಣ ವ್ಯಾಪಾರಿಯೊಬ್ಬರು 300 ರಿಂದ 500 ಗ್ರಾಂ ಬೆಳ್ಳಿಯಿಂದ ಚಪ್ಪಲಿಯನ್ನು ತಯಾರಿಸಿದ್ದಾರೆ. ಈ ಚಪ್ಪಲಿಗಳ ಬೆಲೆ ಬೆಳ್ಳಿಯ ಮೇಲೆ ಅವಲಂಬಿತವಾಗಿದೆ. ಹಾಗೆಯೇ ಸ್ಯಾಂಡಲ್‌ಗಳ ವಿನ್ಯಾಸಕ್ಕೆ ಬಳಸುವ ಮುತ್ತು, ರತ್ನಗಳ ಆಧಾರದ ಮೇಲೆ ಅವುಗಳ ಮೌಲ್ಯ ಹೆಚ್ಚುತ್ತದೆ. ಈ ಚಪ್ಪಲಿಗಳ ಬೆಲೆ 25,000 ರೂ.ಗಳಿಂದ ಆರಂಭವಾಗುತ್ತದೆ ಎನ್ನುತ್ತಾರೆ ತಯಾರಕರು.

ಕೆಲವರು ಅವರ ಅಂಗಡಿಗೆ ಬಂದು ಬೆಳ್ಳಿ ಚಪ್ಪಲಿ ಬಗ್ಗೆ ಕೇಳುತ್ತಾರೆ. ಮದುವೆ ಸೀಸನ್ ನಡೆಯುತ್ತಿದ್ದು, ಆದೇಶದಂತೆ ವಧು-ವರರಿಗೆ ಚಪ್ಪಲಿ ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಆಭರಣ ಮಳಿಗೆಯ ಮಾಲೀಕ ವಿನೋದ್ ಮಹೇಶ್ವರಿ. ವಧು-ವರರಿಗೆ ಮಾತ್ರವಲ್ಲದೆ ಮಕ್ಕಳಿಗೂ ಬೆಳ್ಳಿಯ ಚಪ್ಪಲಿ ತಯಾರಾಗಿದೆಯಂತೆ.

ಇತ್ತೀಚಿನ ದಿನಗಳಲ್ಲಿ ವರ ಶೇರ್ವಾನಿಗಳನ್ನು ಧರಿಸುವುದು ಸಾಮಾನ್ಯವಾಗಿದೆ. ವರ ಧರಿಸುವ ಬೆಲ್ಟ್ ಗಳನ್ನೂ ಬೆಳ್ಳಿಯಿಂದಲೇ ಶೇರ್ವಾನಿಗೆ ಸೂಕ್ತ ಮಾದರಿಯಲ್ಲಿ ಮಾಡಲಾಗಿದೆ. ಬೆಲ್ಟ್‌ ಹಾಗೂ ಚಪ್ಪಲಿಗಳ ಮೇಲೆ ಮುತ್ತುಗಳು ಮತ್ತು ರತ್ನಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕವಾಗಿ ಕಾಣುವುದರಿಂದ ಅನೇಕರು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. 100 ರಿಂದ 500 ಗ್ರಾಂ ತೂಕದ ಈ ಪಾದರಕ್ಷೆಗಳ ಬೆಲೆ ರೂ. 25 ಸಾವಿರಕ್ಕೆ ಮಾರಾಟವಾಗುತ್ತಿದೆ. ಅದೇನೇ ಇರಲಿ, ಶೇರ್ವಾನಿಯಲ್ಲಿ ಬೆಳ್ಳಿಯ ಚಪ್ಪಲಿ ತೊಟ್ಟರೆ ರಾಯಲ್ ಲುಕ್ ಬೇರೆಯೇ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!