HEALTH| ಕಣ್ಣು ಆರೋಗ್ಯವಾಗಿರಲು ಕೆಲ ಸರಳ ಮುನ್ನೆಚ್ಚರಿಕೆಗಳನ್ನು ಅನುಸರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಿಜಿಟಲ್ ಯುಗದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಡಿಜಿಟಲ್ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ಇದರಿಂದ ದೃಷ್ಟಿ ಮಂದವಾಗುವುದು, ಕಣ್ಣು ಒಣಗುವುದು, ಆಯಾಸ ಮತ್ತು ಇತರ ಹಲವು ಸಮಸ್ಯೆಗಳು ಉಂಟಾಗುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ಕೆಲ ಮುನ್ನೆಚ್ಚರಿಕೆಗಳನ್ನು ಅನುಸರಿಸಿ..

  • ಡಿಜಿಟಲ್ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ಕಣ್ಣುಗಳ ಮೇಲೆ ಒತ್ತಡ ಬೀಳುತ್ತದೆ. ಇದು ಮಂದ ದೃಷ್ಟಿ, ಒಣ ಕಣ್ಣುಗಳು, ತಲೆನೋವು, ಆಯಾಸಕ್ಕೆ ಕಾರಣವಾಗುತ್ತದೆ..ಇದರಿಂದ ಹೊರಬರಲು ಪ್ರತಿ 20 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ ಅದೇ ಸಮಯದಲ್ಲಿ 20 ಅಡಿ ದೂರದಲ್ಲಿರುವ ವಸ್ತುಗಳನ್ನು ನೋಡಲು ಪ್ರಯತ್ನಿಸಿ. ಈ ರೀತಿಯ ಸರಳ ವ್ಯಾಯಾಮವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.
  • ಸೂರ್ಯನಿಂದ ಬರುವ ಅತಿನೇರಳೆ (UV) ಕಿರಣಗಳು ಕಣ್ಣುಗಳಿಗೆ ಹಾನಿಯುಂಟುಮಾಡುತ್ತವೆ. ಬಿಸಿಲಿನ ದಿನಗಳಲ್ಲಿ, ಮೋಡ ಕವಿದ ದಿನಗಳಲ್ಲಿ ಹೊರಗೆ ಹೋಗುವಾಗ 100% UVA ಮತ್ತು UVB ಕಿರಣಗಳನ್ನು ತಡೆಯುವ ಸನ್‌ಗ್ಲಾಸ್‌ಗಳನ್ನು ಧರಿಸಿ. ಎಲ್ಲಾ ಕೋನಗಳಿಂದ ಕಣ್ಣುಗಳನ್ನು ರಕ್ಷಿಸುವ ಸನ್ಗ್ಲಾಸ್ ಅನ್ನು ಆರಿಸಿ.
  • ಪೋಷಕಾಂಶಗಳಿಂದ ಕೂಡಿದ ಆಹಾರಗಳು ಕಣ್ಣಿನ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿಟಮಿನ್ ಸಿ, ಇ, ಒಮೆಗಾ -3 ಕೊಬ್ಬಿನಾಮ್ಲಗಳು, ಸತು ಮತ್ತು ಲುಟೀನ್ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಆಹಾರದಲ್ಲಿ ಸೇರಿಸಬೇಕು. ಇವು ದೃಷ್ಟಿಗೆ ಒಳ್ಳೆಯದು ಮಾತ್ರವಲ್ಲ, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಅಸಮರ್ಪಕ ನೀರಿನ ಸೇವನೆಯು ಕಣ್ಣುಗಳು ಒಣಗಲು ಕಾರಣವಾಗಬಹುದು. ಕೆಫೀನ್ ಮತ್ತು ಆಲ್ಕೋಹಾಲ್ ಪಾನೀಯಗಳನ್ನು ತ್ಯಜಿಸುವುದು ಉತ್ತಮ. ಏಕೆಂದರೆ ಅವು ನಿರ್ಜಲೀಕರಣವನ್ನು ಇನ್ನಷ್ಟು ಹದಗೆಡಿಸುತ್ತವೆ.
  • ಕಣ್ಣುಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸ್ಪರ್ಶಿಸುವ ಮೊದಲು ಕೈಗಳನ್ನು ತೊಳೆಯಿರಿ. ಕಾಂಟ್ಯಾಕ್ಟ್ ಲೆನ್ಸ್ ಕೇಸ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಾಯಿಸಬೇಕು. ಕಣ್ಣುಗಳನ್ನು ಕೆರಳಿಸುವ ಧೂಳು ಮತ್ತು ಕೊಳಕು ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ.

ಇದೆಲ್ಲಾ ಕೇವಲ ತಿಳುವಳಿಕೆಗಾಗಿ. ಕಣ್ಣಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!