ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೇನ್, ಪೋರ್ಚುಗಲ್ ಹಾಗೂ ದಕ್ಷಿಣ ಫ್ರಾನ್ಸ್‌ನಲ್ಲಿ ಏಕಕಾಲಕ್ಕೆ ವಿದ್ಯುತ್ ಕಡಿತಗೊಂಡಿದ್ದು, ಇದರಿಂದ ಲಕ್ಷಾಂತರ ಜನರು ಪರದಾಡುವಂತಾಗಿದೆ.
ಆದ್ರೆ ವಿದ್ಯುತ್ ಕಡಿತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೈಲು (Train) ಸಂಚಾರ ಹಾಗೂ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಸ್ಪ್ಯಾನಿಷ್ ಪ್ರಧಾನಿ ಪೆಡ್ರೋ ಸ್ಯಾಂಚೆಜ್ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲು ಗ್ರಿಡ್ ಆಪರೇಟರ್ ತುರ್ತು ಸಭೆ ಕರೆದಿದ್ದಾರೆ. ಇಂಧನ ಸಚಿವೆ ಸಾರಾ ಆಗೆಸೆನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿ ರೆಡ್ ಎಲೆಕ್ಟ್ರಿಕಾ, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಜೊತೆಗೆ ವಿದ್ಯುತ್ ಕಡಿತಕ್ಕೆ ನಿಖರ ಕಾರಣವನ್ನೂ ಪರಿಶೀಲಿಸಲಾಗುತ್ತಿದೆ, ಅದಕ್ಕಾಗಿ ಯುರೋಪಿಯನ್ ನೆಟ್‌ವರ್ಕ್ ಆಫ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಆಪರೇಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಏಕಕಾಲಕ್ಕೆ ದೇಶದ ವಿವಿಧೆಡೆ ವಿದ್ಯುತ್ ಕಡಿತಗೊಂಡ ಪರಿಣಾಮ ಸ್ಪೇನ್‌ನಾದ್ಯಂತ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮ್ಯಾಡ್ರಿಡ್‌ನ ವಿಮಾನಗಳ ಹಾರಟದಲ್ಲೂ ಸಮಸ್ಯೆ ಉಂಟಾಗಿದೆ.