ಸಿಂಗಾಪುರಕ್ಕೆ ಕೋವಿಡ್ ಥ್ರೆಟ್: ಹೆಮ್ಮಾರಿ ಹಿಮ್ಮೆಟ್ಟಿಸಲು ಫೀಲ್ಡ್‌ಗಿಳಿದ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಹೆಮ್ಮಾರಿಯ ಆರ್ಭಟ ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಂಗಾಪುg ಸರ್ಕಾರ ಫುಲ್ ಅಲರ್ಟ್ ಆಗಿದ್ದು, ಸಮಾರೋಪಾದಿಯಲ್ಲಿ ನಿಯಂತ್ರಣ ಕ್ರಮಕ್ಕೆ ಮುಂದಾಗಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಸೋಂಕು ಸಿಂಗಾಪುರವನ್ನು ಅಕ್ಷರಶಃ ಕಂಗಾಲಾಗಿಸಿದ್ದು, ವರ್ಷಾಂತ್ಯದ ಪ್ರಯಾಣ, ಹಬ್ಬದ ದಿನಗಳಲ್ಲಿನ ಓಡಾಟ, ಸಮುದಾಯ ಸಂವಹನಗಳು ಸೇರಿದಂತೆ ವಿವಿಧ ಅಂಶಗಳಿಗೆ ಕಡಿವಾಣ ಹಾಕುವತ್ತ ಚಿಂತನೆ ನಡೆಸಿದೆ.
ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಜಾರಿಗೆ ತರಲಾಗಿದ್ದು, ಇನ್ನು ವಿಮಾನ ನಿಲ್ದಾಣದಲ್ಲೂ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಅಲ್ಲಲ್ಲಿ ತಪಾಸಣಾ ಯಂತ್ರಗಳನ್ನು ಕೂಡಾ ಅಳವಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!