ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋ ಸಿಂಗಾಪುರದ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಲು ಸನ್ನದ್ಧವಾಗಿದ್ದು, ಕ್ಷಣಗಣನೆ ಆರಂಭವಾಗಿದೆ.
‘ಡಿಎಸ್-ಎಸ್‌ಎಆರ್’ ಹಾಗೂ ಇತರ ಆರು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ56 ರಾಕೆಟ್ ಭಾನುವಾರ ಬೆಳಿಗ್ಗೆ 6.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಿಮ್ಮಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಇಸ್ರೊದ ವಾಣಿಜ್ಯ ಉದ್ದೇಶದ ಅಂಗಸಂಸ್ಥೆಯಾಗಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಬಾಹ್ಯಾಕಾಶ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಿದೆ.
ಇತ್ತೀಚೆಗೆ ಚಂದ್ರನತ್ತ ಗಗನನೌಕೆಯನ್ನು (ಚಂದ್ರಯಾನ-3) ಉಡ್ಡಯನ ಮಾಡಿ ಇಸ್ರೋ ಗಮನ ಸೆಳೆದಿತ್ತು.