ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಗಾಯಕಿ ಮಂಗ್ಲಿ ಕಾರು ಅಪಘಾತವಾಗಿದೆ.
ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದ್ದು, ಮಂಗ್ಲಿ ಅವರಿಗೆ ಗಾಯಗಳಾಗಿದೆ.
ಮಂಗ್ಲಿ ರಂಗಾ ರೆಡ್ಡಿ ಜಿಲ್ಲೆಯ ನಂದಿಗಮಾ ಕನ್ಹಾ ಅಧ್ಯಾತ್ಮಿಕ ಉತ್ಸವದಲ್ಲಿ ಭಾಗಿಯಾಗಿ ವಾಪಾಸಾಗುವ ವೇಳೆ ಹಿಂಬದಿಯಿಂದ ಬಂದ ಟ್ರಕ್ ಕಾರ್‌ಗೆ ಡಿಕ್ಕಿ ಹೊಡೆದಿದೆ.
ಕಾರ್‌ನಲ್ಲಿ ಮನೋಹರ್, ಮೇಘರಾಜ್ ಹಾಗೂ ಮಂಗ್ಲಿ ಪ್ರಯಾಣಿಸುತ್ತಿದ್ದು, ಮೂವರಿಗೂ ಗಾಯಗಳಾಗಿವೆ. ಟ್ರಕ್ ಚಾಲಕ ಕುಡಿದು ಗಾಡಿ ಓಡಿಸುತ್ತಿದ ಎಂದು ಹೇಳಲಾಗಿದೆ.