ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧನುಷ್ ಹಾಗೂ ಐಶ್ವರ್ಯಾ ದಾಂಪತ್ಯ ಜೀವನ ಅಂತ್ಯವಾಗಿದೆ. ಈ ಬಗ್ಗೆ ಗಾಯಕಿ ಸುಚಿತ್ರಾ ಮಾತನಾಡಿದ್ದು, ಧನುಷ್ ಅಲ್ಲಿಗೆ ಹೋಗಿದ್ದೇ ಡಿವೋರ್ಸ್‌ಗೆ ಕಾರಣ ಎಂದು ಹೇಳಿದ್ದಾರೆ.
ತಮಿಳು ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಧನುಷ್‌ಗೆ ಪರಸ್ತ್ರೀ ಸಹವಾಸ ಇತ್ತು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಆಗೋಕೆ ಇಬ್ಬರೂ ಕಾರಣವೇ, ಐಶ್ವರ್ಯಾ ಒಳ್ಳೆಯ ತಾಯಿ ಅಲ್ಲ. ಧನುಷ್-ಐಶ್ವರ್ಯಾ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ. ರೀಲ್ಸ್ ಮಾಡೋ ತಾಯಿಗಳು ನನಗೆ ಇಷ್ಟ ಆಗುವುದಿಲ್ಲ. ಧನುಷ್ ಓರ್ವ ಒಳ್ಳೆಯ ತಂದೆ, ಆದರೆ ಒಳ್ಳೆಯ ಪತಿ ಹೌದೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ.
ಮದುವೆ ಆದ ಬಳಿಕ ಯಾರಾದರೂ ಡೇಟ್ಗೆ ಹೋಗುತ್ತಾರಾ? ಧನುಷ್ ಹೋಗಿದ್ದರು. ಓಪನ್ ಆಗಿ ಧನುಷ್ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.