ಎಲ್ಲೆಲ್ಲೂ ಸದ್ದು ಮಾಡುತ್ತಿರುವ ‘ಪ್ರೇತ’: ಮದುವೆಗೆ ವರ ಬೇಕಾಗಿದ್ದಾರೆ ಜಾಹೀರಾತಿನ ಅಸಲಿ ಕಹಾನಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ, ವಧು ಬೇಕಾಗಿದ್ದಾರೆ ಎಂಬ ಜಾಹೀರಾತುಗಳನ್ನು ನೀವು ನೋಡಿರಬಹುದು. ಮನೆಯಲ್ಲಿ ಹುಡುಗಿಗೆ ಅಥವಾ ಹುಡುಗನಿಗೆ ಮದುವೆ ಮಾತುಕತೆ ನಡೆದಾಗ, ಸಾಮಾನ್ಯವಾಗಿ ಪತ್ರಿಕೆಯಲ್ಲಿ ಜಾಹೀರಾತು ಹಾಕಲಾಗುತ್ತದೆ. ಇದರಿಂದ ಸೂಕ್ತವಾದ ವಧು ಮತ್ತು ವರನನ್ನು ಹುಡುಕಬಹುದು ಎಂಬುದು ಅವರ ಉದ್ದೇಶವಾಗಿರುತ್ತದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮದುವೆ ಜಾಹೀರಾತೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, 30 ವರ್ಷಗಳ ಹಿಂದೆ ತೀರಿಕೊಂಡ ಮಗಳಿಗೆ ವರನನ್ನು ಹುಡುಕುತ್ತಿದೆ ಇಲ್ಲೊಂದು ಕುಟುಂಬ. ಈ ಸುದ್ದಿ ವಿಚಿತ್ರ ಎನಿಸಿದರೂ ಇದು ಸತ್ಯ. ಜಾಹೀರಾತಿನ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

“ತಮ್ಮ ಮಗಳು 30 ವರ್ಷಗಳ ಹಿಂದೆ ನಿಧನಗೊಂಡಿದ್ದು, ನಮಗೆ 30 ವರ್ಷಗಳ ಹಿಂದೆ ನಿಧನರಾದ ವರನ ಅಗತ್ಯವಿದೆ. ಅಂತಹ ಯಾವುದೇ ವರನಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ’’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ಜಾಹಿರಾತು ನೀಡಿದೆ. ಈ ಜಾಹಿರಾತಿನ ಜೊತೆಗೆ ಮೃತ ಬಾಲಕಿಯ ವಿವರವನ್ನೂ ಸಹ ನೀಡಲಾಗಿದೆ.

ಈ ಸುದ್ದಿ ಕೇಳಲು, ನೋಡಲು ನಮಗೆ ಆಶ್ಚರ್ಯವಾಗಬಹುದು, ಆದರೆ ಕರಾವಳಿ ಭಾಗದ ಜನರಿಗೆ ಇದು ಹೊಸದಲ್ಲ. ಇದು ಅಪಹಾಸ್ಯ ಮಾಡುವ ವಿಷಯವೂ ಅಲ್ಲ. ಏಕೆಂದರೆ ಸತ್ತವರಿಗೆ ಮದುವೆ ಮಾಡುವ ಪದ್ಧತಿ ಇದೆ. ಇದು ಒಂದು ನಂಬಿಕೆ, ಆದ್ದರಿಂದ ಗೊತ್ತಿಲ್ಲದವರಿಗೆ ಇದು ವಿಚಿತ್ರವಾಗಿ ಕಾಣಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!