ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಹಾಲ್ನೊರೆಯಂಥ ಫಾಲ್ಸ್ ಹರಿಯುತ್ತಿದೆ. ಕಾರ್‌ನಲ್ಲೇ ಕೂತು ಅದರ ಅಂದವನ್ನು ಅನುಭವಿಸಲಾಗದೆ ಪ್ರಯಾಣಿಕರು ನೀರಿಗಿಳಿದು ಖುಷಿಪಟ್ಟಿದ್ದಾರೆ. ಅಲ್ಲಲ್ಲೇ ಗಾಡಿ ನಿಲ್ಲಿಸಿ, ರಸ್ತೆ ಬದಿ ಬಟ್ಟೆ ಇಲ್ಲದೆ ನೀರಿನಲ್ಲಿ ಆಟವಾಡೋ ಪ್ರವಾಸಿಗರಿಗೆ ಪೊಲೀಸರು ಚುರುಕ್ ಮುಟ್ಟಿಸಿದ್ದಾರೆ.
ನಿಷೇಧಿತ ಫಾಲ್ಸ್ ಒಂದರ ಬಳಿ ಪ್ರವಾಸಕ್ಕೆ ಬಂದಿದ್ದ ಯುವಕರು ಹುಚ್ಚಾಟ ಮಾಡಿದ್ದು, ಬಣಕಲ್ ಪೊಲೀಸರು ಯುವಕರ ಬಟ್ಟೆ ಹೊತ್ತೊಯ್ದು ಬುದ್ಧಿ ಕಲಿಸಿದ್ದಾರೆ.
ಜಲಪಾತದ ಬಳಿ ಇರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟರು ಯುವಕರು ಮಾತು ಕೇಳದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್.. ಬಟ್ಟೆ ಕೊಡಿ ಎಂದು ಓಡಿದ್ದಾರೆ.