Friday, June 2, 2023

Latest Posts

ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಶಿವಸಿದ್ದೇಶ್ವರ ಸ್ವಾಮೀಜಿ

ಹೊಸದಿಗಂತ ವರದಿ ತುಮಕೂರು:

ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ (ಮನೋಜ್ ಕುಮಾರ್ ) ಇಂದು ಧೀಕ್ಷೆ ಪಡೆದುಕೊಂಡರು.

ಅಕ್ಷಯ ತೃತೀಯ ದಿನವಾದ ಇಂದು ಸಿದ್ಧಗಂಗಾ ಮಠದ ಆಡಳಿತಕ್ಕೆ ಒಳಪಡುವ ರಾಮನಗರ ಜಿಲ್ಲೆಯ ಕಂಚುಗಲ್ ಬಂಡೆಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಮಹಾಲಿಂಗಸ್ವಾಮೀಜಿ (ಹರ್ಷ. ಕೆ.ಎಂ.)ಮತ್ತು ದೇವನಹಳ್ಳಿ ತಾಲೂಕಿನ ವಿಜಾಪುರದ ಬಸವಕಲ್ಯಾಣ ಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಸದಾಶಿವಸ್ವಾಮೀಜಿ (ಗೌರೀಶ್ ಕುಮಾರ್) ಪಟ್ಟಾಧಿಕಾರ ಮತ್ತು ಉತ್ತರಾಧಿಕಾರದ ಧೀಕ್ಷೆ ಪಡೆದುಕೊಂಡರು.

ಇಂದು ಬೆಳಗ್ಗೆ 5 ಗಂಟೆಯಿಂದ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, 6:30ಕ್ಕೆ ದೀಕ್ಷಾ ಸಂಸ್ಕಾರ ಮುಗಿದಿದೆ. ನಂತರ ಬೆಳಿಗ್ಗೆ 7:30ಕ್ಕೆ ಪಟ್ಟಾಭಿಷೇಕ ಸರಳವಾಗಿ ಆರಂಭಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವಮೂರ್ತಿ ಮಹಾಸ್ವಾಮಿಗಳು ಸೇರಿ ಅನೇಕ ಮಠಾಧೀಶರು ಭಾಗವಹಿಸಿದ್ದರು.

ಸರಳವಾಗಿ ಈ ಸಮಾರಂಭ ಆಯೋಜನೆ ಮಾಡಲಾಗಿದ್ದು, ಮಠದ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!