ಕಲಬುರಗಿಯಲ್ಲಿ ವಿದ್ಯುತ್ ತಂತಿ ತಗುಲಿ ಆರು ಎಕರೆ ಕಬ್ಬು ಸರ್ವನಾಶ

ಹೊಸದಿಗಂತ ವರದಿ ಕಲಬುರಗಿ:

ವಿದ್ಯುತ್ ಕಂಬದ ತಂತಿ ತಗುಲಿ ಆರು ಎಕರೆಯಲ್ಲಿ ಬೆಳೆಯಲಾಗಿದ್ದ ಕಬ್ಬು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಾಗಣಗೇರಾ ಗ್ರಾಮದ ಗೊಲ್ಲಾಳಪ್ಪಾ ನಾಗಾವಿ ಎಂಬುವವರಿಗೆ ಸೇರಿದ ೬ ಎಕರೆ ಜಮೀನು ಆಗಿದ್ದು, ಇನ್ನೇನು ಕಟಾವಿಗೆ ಬಂದು ನಿಂತಿದ್ದ ಆರು ಎಕರೆಯಲ್ಲಿ ಬೆಳೆಯಲಾಗಿದ್ದ ಕಬ್ಬು ಸಂಪೂರ್ಣವಾಗಿ ಬೆಂಕಿಗೆ ಬಲಿಯಾಗಿದೆ.

ಜಮೀನಿನಲ್ಲಿ ಹೈ ಟೆನ್ಶನ್ ವೈರ್ ಕೆಳಗಡೆ ಜೋತು ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದ್ದು, ಜೇಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಡ ರೈತನ ಆಸರೆಯಾಗಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದ್ದರಿಂದ ರೈತನ ಕೈಗೆ ಬಂದ ಕಬ್ಬು ಬಾಯಿಗೆ ಬಾರದಂತಾಗಿದೆ.

ಈ ಬಗ್ಗೆ ಹಿಂದೆಯೂ ಜೋತು ಬಿದ್ದಿರುವ ಹೈ ಟೆನ್ಶನ್ ವೈರ್ ಬಗ್ಗೆ ಜೇಸ್ಕಾಂ ಅಧಿಕಾರಿಗಳಿಗೆ ಗಮನಕ್ಕೆ ತಂದರು ಸಮಸ್ಯೆ ಬಗೆಹರಿಸಿಲ್ಲ.ಹೀಗಾಗಿ ಕಬ್ಬಿಗೆ ವಿದ್ಯುತ್ ತಂತಿ ತಗುಲಿ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ ಎಂದು ಜಮೀನಿನ ರೈತ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!