ಹೊಸದಿಗಂತ ಡಿಜಿಟಲ್ ಡೆಸ್ಕ್
ಅಂತರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿದ್ದಕ್ಕಾಗಿ ಮೈಲಾಡುತುರೈ ಜಿಲ್ಲೆಯ ಜೆಗದಪ್ಟಿನಂ ಬಂದರಿನಿಂದ ಸಮುದ್ರಕ್ಕೆ ಇಳಿದಿದ್ದ ತಮಿಳುನಾಡಿನ ಆರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಜಾಫ್ನಾದಿಂದ 20 ಕಿಮೀ ದೂರದಲ್ಲಿರುವ ಕರೈನಗರ ಬಳಿ ಮೀನುಗಾರರನ್ನು ಬಂಧಿಸಲಾಗಿದೆ.
ಮೀನುಗಾರರ ಪ್ರಯಾಣದ ಸಮಯದಲ್ಲಿ, ದೋಣಿಯ ಮಾಲೀಕ ಸೇರಿದಂತೆ ಆರು ಮೀನುಗಾರರನ್ನು ನೌಕಾಪಡೆ ಬಂಧಿಸಿದೆ.
ಬಂಧಿತರನ್ನು ವನಗಿರಿ ಗ್ರಾಮದ ಕೆ ಕಾರ್ತಿಕ್, ಪಿ ದೇವರಾಜ್, ಎಂ ಸುರೇಶ್, ಕೆ ತಿರುಮೇನಿ, ವೇಲ್ಮುರುಗನ್ ಮತ್ತು ಸುಂದರಂ ಎಂದು ಗುರುತಿಸಲಾಗಿದೆ.
ಬಂಧನದ ನಂತರ ಮೀನುಗಾರರನ್ನು ವಿಚಾರಣೆಗಾಗಿ ಮಾಯಿಲಟ್ಟಿ ಬಂದರಿಗೆ ಕರೆದೊಯ್ಯಲಾಗಿದೆ. ಜುಲೈ 3 ರಂದು ಜಾಫ್ನಾ ಕರಾವಳಿಯ ಬಳಿ 12 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಇದೀಗ ಮತ್ತೆ ಆರು ಮೀನುಗಾರರ ಬಂಧನವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ