ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಆರು ಮಂದಿ ಮೇಲೆ ದಾಳಿ ನಡೆಸಿರುವ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರ್ ಬಳಿಯ ಬ್ರೂಕ್‌ಲ್ಯಾಂಡ್‌ನಲ್ಲಿ ನಡೆದಿದೆ.
ಸಾಕು ನಾಯಿಯನ್ನು ಬೆನ್ನಟ್ಟಿ ಕಾಡಿನಿಂದ ಬಂದ ಚಿರತೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿಯ ಬ್ರೂಕ್‌ಲ್ಯಾಂಡ್‌ನ ಮನೆಗೆ ನುಗ್ಗಿದೆ. ಕೂಡಲೇ ನಿವಾಸಿಗಳು ಕುನೂರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿದ್ದವರನ್ನು ರಕ್ಷಿಸಲು ಹೋದ ಅರಣ್ಯ ಇಲಾಖೆ ಅಧಿಕಾರಿಗಳು, ಪತ್ರಕರ್ತ ಸೇರಿದಂತೆ 6 ಮಂದಿ ಮೇಲೆ ದಾಳಿ ನಡೆಸಿದೆ.
ಪತ್ರಕರ್ತ ಸೇರಿದಂತೆ ಎಲ್ಲ ಗಾಯಾಳುಗಳನ್ನು ಕೂನೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಚಿರತೆ ಇನ್ನೂ ಮನೆಯೊಳಗೆ ಇದ್ದು, ಚಿರತೆ ಹಿಡಿಯಲು ಅರಣ್ಯ ತಂಡ ಕಾರ್ಯಾಚರಣೆ ನಡೆಸುತ್ತಿದೆ.