ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ತಿಕ ಮಾಸದಲ್ಲಿ ದೀಪಗಳೇ ಪ್ರಧಾನ. ಹತ್ತಿಯನ್ನು ಹಸುವಿನ ತುಪ್ಪದಲ್ಲಿ ನೆನೆಸಿ ದೀಪ ಹಚ್ಚುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಿಂದು ಸಂಪ್ರದಾಯದ ಕಾರ್ತಿಕ ಮಾಸದಲ್ಲಿ ‘ಬೆಟ್ಟದ ನೆಲ್ಲಿಕಾಯಿ’ ದೀಪ ಹಚ್ಚುವುದಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಈ ದೀಪಗಳನ್ನು ಹಚ್ಚಿದರೆ ಸಕಲ ಸೌಭಾಗ್ಯ..ನವ ಗ್ರಹ ದೋಷ ಪರಿಹಾರವಾಗುತ್ತದೆ ೆಂದು ಹೇಳಲಾಗುತ್ತದೆ.
ನೆಲ್ಲಿಕಾಯಿ ಮರವನ್ನು ದೇವರ ಸಾಕಾರವೆಂದು ಪರಿಗಣಿಸಲಾಗಿದೆ. ಶಿವಕೇಶನೊಂದಿಗೆ ಬ್ರಹ್ಮ ಮತ್ತು ಸಕಲ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಕಾರ್ತಿಕ ತಿಂಗಳಲ್ಲಿ, ವಿಶೇಷವಾಗಿ ದಶಮಿ, ಏಕಾದಶಿ, ಸೋಮವಾರ ಮತ್ತು ಹುಣ್ಣಿಮೆಯ ತಿಥಿಯಂದು, ಈ ಮರದ ಕೆಳಗೆ ದೀಪಗಳನ್ನು ಬೆಳಗಿಸಲಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಅಮೃತಬಳ್ಳಿಯ ದೀಪವನ್ನು ಬೆಳಗಿಸುವುದರಿಂದ ಹೆಚ್ಚಿನ ಲಾಭವಾಗುತ್ತದೆ.
ಕಾರ್ತಿಕ ಪೌರ್ಣಮಿಯ ದಿನ ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ವೃತ್ತಾಕಾರವಾಗಿ ಕತ್ತರಿಸಲಾಗುತ್ತದೆ. ಅದರ ಮಧ್ಯಕ್ಕೆ ತುಪ್ಪವನ್ನು ತುಂಬಿ ಅದರಲ್ಲಿ ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸಬೇಕು. ಈ ರೀತಿ ಹಚ್ಚಿದರೆ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.