ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ತಿಂಗಳ ಮಗುವೊಂದು ನೊಬೆಲ್ ವಿಶ್ವ ದಾಖಲೆಯನ್ನು ಗೆದ್ದಿದೆ. ಆರು ತಿಂಗಳ ವಯಸ್ಸೆಂದರೆ ಸರಿಯಾಗಿ ಮಾತುಗಳೂ ಬಾರದ ಕಂದಮ್ಮ. ನೆಲದ ಮೇಲೆ ಕುಳತುಕೊಳ್ಳುವುದೇ ಹೆಚ್ಚು ಅಂತಹ ವಯಸ್ಸಲ್ಲಿ ಈ ಮಗು ಮಾಡಿದ ಸಾಧನೆ ಆದರೂ ಏನು ಅಂತ ಆಶ್ಚರ್ಯ ಆಗ್ತಿದ್ಯಾ?
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಶಾಸ್ತ್ರಿನಗರದ ಪವನ್ ಕುಮಾರ್, ಸೌಮ್ಯಪ್ರಿಯ ದಂಪತಿಯ ಪ್ರೀತಿಯ ಮಗ ಪ್ರಜ್ವಲ್. ಈ ಮಗುವಿನ ವಯಸ್ಸು ಆರು ತಿಂಗಳು ಮಾತ್ರ. ಈ ವಯಸ್ಸಿಗೇ ಅಮ್ಮ ಹೇಳಿದ್ದನ್ನೆಲ್ಲ ಗುರುತಿಸುವ ಕಲೆ ಇದೆ. ತಾಯಿ ಕೆಲವು ಆಟಿಕೆಗಳನ್ನು ತೋರಿಸಿ ಅವುಗಳ ಹೆಸರುಗಳನ್ನು ಹೇಳಿದರೆ, ಈ ಪೋರ ಅವುಗಳನ್ನು ಗುರುತಿಸುತ್ತಾನೆ. ಅದು ಪ್ರಾಣಿ, ಹಣ್ಣು, ವಾಹನ, ಪಕ್ಷಿ, ತರಕಾರಿ ಮತ್ತು ಸಂಖ್ಯೆಗಳ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಇದೆ. ಪ್ರಜ್ವಲ್ ತಾಯಿ ಸೌಮ್ಯಾ ತಮ್ಮ ಮಗುವಿನ ಪ್ರತಿಭೆ ಕಂಡು ಬೆಚ್ಚಿಬಿದ್ದರು. ಅವರ ತಂದೆ ವಿಡಿಯೋ ವಿಡಿಯೋ ತೆಗೆದು ಜುಲೈ 9ರಂದು ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಿದ್ದರು.
ಈ ವಿಡಿಯೋ ನೋಡಿದ ನಂತರ ಸಂಸ್ಥೆಯ ಪ್ರತಿನಿಧಿಗಳು ಜುಲೈ 29 ರಂದು ಮಗುವಿಗೆ ನೊಬೆಲ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸಿದ್ದಾರೆ. ಆರು ತಿಂಗಳಿಗೇ ಈ ಪ್ರಶಸ್ತಿ ಪಡೆದ ಮಗುವಿನ ದಾಖಲೆ ಕೇಳಿದವರೆಲ್ಲ ಅಚ್ಚರಿಗೊಂಡಿದ್ದಾರೆ.