Friday, September 29, 2023

Latest Posts

ಮೂರೇ ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೇವನಹಳ್ಳಿಯ ಬಿಜ್ಜವಾರ ಗ್ರಾಮದಲ್ಲಿ ಘಟನೆ ನಡೆದಿದ್ದು, ರಮೇಶ್ ಹಾಗೂ ಸಹನಾ ಮೃತಪಟ್ಟಿದ್ದಾರೆ. ದೇವನಹಳ್ಳಿಯಲ್ಲಿ ಎಲೆಕ್ಸ್ರಾನಿಕ್ಸ್ ಕಂಪನಿಯೊಂದರಲ್ಲಿ ರಮೇಶ್ ಕೆಲಸ ಮಾಡುತ್ತಿದ್ದರು. ಪ್ರೀತಿಸಿ ಸಹನಾರನ್ನು ಮದುವೆಯಾಗಿದ್ದರು.

ಬಾಡಿಗೆ ಮನೆಯಲ್ಲಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಬಿಜ್ಜವಾರದ ನೆಂಟರ ಮನೆಗೆ ದಂಪತಿ ಬಂದಿದ್ದು, ರಾತ್ರಿ ಮನೆಯಿಂದ ವಾಕಿಂಗ್‌ಗಾಗಿ ಹೊರಬಂದಿದ್ದರು. ಅದಾದನಂತರ ಅವರು ಮನೆಗೆ ವಾಪಾಸಾಗಿಲ್ಲ. ಕೃಷಿ ಹೊಂಡದಲ್ಲಿ ದಂಪತಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಯಾ ಅಥವಾ ಕಾಲು ಜಾರಿ ಹೊಂಡಕ್ಕೆ ಬಿದ್ದದ್ದಾ ಮಾಹಿತಿ ದೊರೆತಿಲ್ಲ. ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!