ಸದ್ಗುರು ಸಾರಥ್ಯದ ಈಶ ಯೋಗ ಕೇಂದ್ರದಿಂದ ಎಂಟು ವರ್ಷದಲ್ಲಿ ಆರು ಮಂದಿ ನಾಪತ್ತೆ ಹೈಕೋರ್ಟ್‌ಗೆ ರಿಪೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಈಶ ಯೋಗ ಕೇಂದ್ರದಿಂದ 2016ನೇ ಇಸವಿಯಿಂದ ಇದುವರೆಗೆ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದರೆ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಈ ಪೈಕಿ ಕೆಲವು ಪ್ರಕರಣಗಳಲ್ಲಿ ನಾಪತ್ತೆಯಾದವರು ಮರಳಿ ಬಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ ಎಂದೂ ಪೊಲೀಸರು ಹೈಕೋರ್ಟ್‌ಗೆ ಹೇಳಿದ್ದಾರೆ.

ಈಶ ಯೋಗ ಕೇಂದ್ರದಲ್ಲಿ ಕೆಲಸಮಾಡುತ್ತಿದ್ದ ತಮ್ಮ ಸಹೋದರ ಗಣೇಶನ್ ಎಂಬವರು 2023ರ ಮಾರ್ಚ್ ತಿಂಗಳಿನಲ್ಲಿ ಕಾಣೆಯಾಗಿದ್ದಾರೆ. ಈ ಬಗ್ಗೆ ವಿಚಾರಿಸಲು ತಾವು ಅಲ್ಲಿಗೆ ಹೋಗಿದ್ದಾಗ ಅವರು ಅಲ್ಲಿಗೆ ಬಾರದೆ ಎರಡು ದಿನಗಳಾಯಿತು ಎಂಬ ಮಾಹಿತಿ ಸಿಕ್ಕಿತ್ತು. ಅವರನ್ನು ಹುಡುಕಿಕೊಡಬೇಕು ಎಂದು ಎಂದು ತಿರುನೆಲ್ವೇಲಿ ಜಿಲ್ಲೆಯ ತಿರುಮಲೈ ಎಂಬವರು ಕೋರ್ಟ್ ಮೆಟ್ಟಿಲೇರಿದ್ದರು.

ತಿರುಮಲೈ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ಗೆ ಈ ಮಾಹಿತಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಏ.8ಕ್ಕೆ ನಿಗದಿಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. Our youngsters are misguided by a lure that their issues will be sorted out by cult gurus. I wish all of them practice old kind of religion… Celebrating festivals with family, helping at home instead of ashrams, respecting women and parents. Discourses denigrate faminine ability to tackle life as also changing uninformed youth to disrespect family values. True in Jaggi Vasudev case.

LEAVE A REPLY

Please enter your comment!
Please enter your name here