ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು : ಅರಣ್ಯ ಇಲಾಖೆಯಿಂದ ಅಂತಿಮ ಸಂಸ್ಕಾರ

ಹೊಸದಿಗಂತ ವರದಿ ಯಲ್ಲಾಪುರ:

ಅರಣ್ಯ ವಲಯದ ದೇಹಳ್ಳಿ ಶಾಖೆಯ ಕಟ್ಟಿಗೆ ಗ್ರಾಮದ, ಹಿಡ್ಕೆಮನೆ ತೋಟದಲ್ಲಿ ಕಾಡಾನೆಯೊಂದು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ. ಈ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಭಾನು ಮಾಹಿತಿ ನೀಡಿದ್ದಾರೆ.

ದಾಂಡೇಲಿಯ ಕಾಳಿ ವನ್ಯಜೀವಿ ವಿಭಾಗದ ವನ್ಯಜೀವಿ ವಿಧಿ ವಿಜ್ಞಾನ ಪರಿಣಿತರು ಆಗಮಿಸಿ ಸದರಿ ಪ್ರಕರಣದ ಸ್ಥಾನಿಕ ಪರಿಶೀಲನೆ ಮಾಡಿ ಸಾಕ್ಷಾಧಾರಗಳನ್ನು ಸಂಗ್ರಹಿಸಿದರು. ಯಲ್ಲಾಪುರ ಹಾಗೂ ಶಿರಸಿಯಿಂದ ಆಗಮಿಸಿದ ಪಶು ವೈದ್ಯರ ತಂಡವು ಮೃತ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಹೆಚ್ಚಿನ ತನಿಖೆಗಾಗಿ ಅಂಗಾಂಗಗಳ ಮಾದರಿಯನ್ನು ಸಂಗ್ರಹಿಸಿದರು. ನಂತರ ವಿಧಿ ವಿಧಾನ ಅನುಸರಸಿ ಮೃತ ಕಾಡಾನೆಯನ್ನು ಮಣ್ಣಲ್ಲಿ ಹೂಳುವ ಮೂಲಕ ಅಂತ್ಯಕ್ರಿಯೆ ನೇರವೇರಿಸಲಾಯಿತು.

ಸ್ಥಳದಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಭಾನು ಜಿ.ಪಿ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಎಚ್.ಎ ,ವಲಯ ಅರಣ್ಯಾಧಿಕಾರಿ ಎಲ್ ಎ ಮಠ ಹಾಗೂ ಅರಣ್ಯ, ಕೆ ಇ ಬಿ, ಇಲಾಖೆ ಯ ಅಧಿಕಾರ ಗಳು ಸಿಬ್ಬಂದಿಗಳು, ಗ್ರಾಮಸ್ಥರು ಸ್ಥಳದಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!