ಭೂಕುಸಿತದ ಬೆನ್ನಿಗೇ ಸತತ ಆರನೇ ಬಾರಿಗೆ ಚೆಂಬುವಿನಲ್ಲಿ ಭೂಕಂಪನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಇದೀಗ ಚೆಂಬು, ಗೂನಡ್ಕ ಭಾಗಗಳಲ್ಲಿ ಆರನೇ ಭಾರಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.
ಚೆಂಬುವಿನಲ್ಲಿ ಶನಿವಾರ ಮಧ್ಯಾಹ್ನ 1.21ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಕಲ್ಲುಗುಂಡಿ ಭಾಗದ ಕೆಲವು ಮನೆಗಳಿಗೂ ಶಬ್ದ ಕೇಳಿದೆ ಎಂದು ತಿಳಿದು ಬಂದಿದೆ.
ಚೆಂಬು ಭೂಕಂಪನದ ಕೇಂದ್ರ ಬಿಂದುವಾಗಿದೆ. ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಜನ ಆತಂಕದಲ್ಲೇ ದಿನದೂಡುತ್ತಿದ್ದಾರೆ.ಇದರ ಜೊತೆಗೆ ಮಳೆಯ ಆರ್ಭಟಕ್ಕೆ ಈ ಭಾಗದಲ್ಲಿ ಭೂಕುಸಿತವೂ ಉಂಟಾಗಿದ್ದು, ಜನ ಸಂಕಷ್ಟಕ್ಕೊಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!