ನವೆಂಬರ್ 19 ರಂದು ಏರ್ ಇಂಡಿಯಾ ಸ್ಫೋಟಕ್ಕೆ ಸ್ಕೆಚ್: ಗುರಪತ್ವಂತ್ ನಿಂದ ಎಚ್ಚರಿಕೆಯ ವಿಡಿಯೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಾಡದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತದ ವಿರುದ್ಧ ಮತ್ತೊಂದು ಎಚ್ಚರಿಕೆ ವಿಡಿಯೋ ಪೋಸ್ಟ್ ಮಾಡಿದ್ದಾನೆ.

ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಗುರುಪತ್ವಂತ್ ಎಚ್ಚರಿಸಿದ್ದಾನೆ. ಆ ದಿನ ಸಿಖ್ ಸಮುದಾಯದ ಯಾರೂ ಕೂಡ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ. ಅದೇ ದಿನ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾನೆ.

ಏರ್ ಇಂಡಿಯಾ ವಿಮಾನದ ಮೇಲೆ ರೋಬೋಟ್ ರಾಕೆಟ್ ಮೂಲಕ ದಾಳಿ ನಡೆಸಲಾಗುತ್ತದೆ. ಹೀಗಾಗಿ ಸಿಖ್ ಸಮುದಾಯದವರು ಏರ್ ಇಂಡಿಯಾ ಪ್ರಯಾಣ ಮಾಡಬೇಡಿ. ನವೆಂಬರ್ 19 ರಂದು ಅತೀ ದೊಡ್ಡ ಅವಘಡ ನಡೆಯಲಿದೆ. ಇದೇ ದಿನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿರುತ್ತದೆ. ಯಾವುದೇ ಸೇವೆ ನೀಡುವುದಿಲ್ಲ ಎಂದು ಗುರಪತ್ವಂತ್ ಸಿಗ್ ಪನ್ನುನ್ ವಿಡಿಯೋದಲ್ಲಿ ಹೇಳಿದ್ದಾನೆ.

ಭಾರತದ ಅರ್ಥವ್ಯವಸ್ಥೆಯನ್ನು ಹಾಳುಮಾಡುತ್ತೇವೆ. ಭಾರತಕ್ಕೆ ಸರಿಯಾದ ಹಾಗೂ ಮೇಲೆಳಲು ಸಾಧ್ಯವಾಗದ ಪೆಟ್ಟು ನೀಡುತ್ತೇವೆ. ಭಾರತದ ಸೊಕ್ಕು ಮುರಿದು ಸಿಖ್ ಸಮುದಾಯದ ಅಧಿಪತ್ಯ ಸ್ಥಾಪನೆಯಾಗಲಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾನೆ.

ಇತ್ತೀಚೆಗೆ ಐಸಿಸಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ಆಯೋಜಿಸಲು ಬಿಡುವುದಿಲ್ಲ. ಕ್ರೀಡಾಂಗಣದ ಮೇಲೆ ಖಲಿಸ್ತಾನಿ ಸದಸ್ಯರು ದಾಳಿ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದನು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!