ಹೊಸದಿಗಂತ ವರದಿ, ಶಿವಮೊಗ್ಗ:
ಕೊಲೆಗಾರರ ಹಿಂದೆ ಇಸ್ಲಾಮಿಕ್ ಶಕ್ತಿ ಅಡಗಿದೆ. ಆ ಶಕ್ತಿಯನ್ನು ಸರ್ಕಾರ ಪತ್ತೆ ಮಾಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಹತ್ಯೆಗೆ ಈಡಾದ ಹರ್ಷ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹರ್ಷನನ್ನು ಹೀನಾಯ, ಭಯಾನಕ, ರಾಕ್ಷಸಿ ಸ್ವರೂಪದಲ್ಲಿ ಕೊಲೆ ಮಾಡಿದ್ದಾರೆ. ಯಾರೋ ಸಾಮಾನ್ಯರು ಈ ಕೊಲೆ ಮಾಡಿಲ್ಲ. ತರಬೇತಿ ಪಡೆದವರೇ ಸ್ಕೆಚ್ ಹಾಕಿ ಕೃತ್ಯವೆಸಗಿದ್ದಾರೆ ಎಂದರು.
ಈ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಮನೆ, ಪೊಲೀಸ್ ಠಾಣೆ ಸುಟ್ಟು ಹಾಕಿದರು. ಪಾದರಾಯನಪುರದಲ್ಲಿ ವೈದ್ಯರು, ನರ್ಸ್‌ಗಳ ಮೇಲೆ ಹಲ್ಲೆ ಮಾಡಿದರು. ಬೆಂಗಳೂರಿನ ರುದ್ರೇಶ್, ಮೈಸೂರಿನ ರಾಜು, ಮಡಿಕೇರಿಯ ಕುಟ್ಟಪ್ಪನ ಹತ್ಯೆ ಮಾಡಿವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೇ ಮಾದರಿಯಲ್ಲಿ ಹರ್ಷನ ಕೊಲೆಯಲ್ಲೂ ಪುನಾರಾವರ್ತನೆಯಾದರೆ ಹಿಂದು ಸಮಾಜ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.