ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಜೈಲು ಪಾಲಾಗಿದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ 4 ವಾರಗಳ ಕಾಲ ಅಂದರೆ ನವೆಂಬರ್ 24ರ ವರೆಗೆ ಹೈಕೋರ್ಟ್ ಜಾಮೀನನ್ನು ಮಂಜೂರು ಮಾಡಿದೆ.
ಇದಕ್ಕೂ ಮುನ್ನ ಚಂದ್ರಬಾಬು ಅವರಿಗೆ ಜಾಮೀನು ನೀಡಲು ಎಸಿಬಿ ನ್ಯಾಯಾಲಯ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಪೂರಕ ಅರ್ಜಿ ಸಲ್ಲಿಸಿದ್ದರು.