ಹೊಳೆಯುವ ಚರ್ಮವನ್ನು ಹೊಂದಲು ಮಹಿಳೆಯರು ಸಲೂನ್‌ಗಳಿಗೆ ಹೋಗಿ ಸಾವಿರಾರು ರೂ. ಖರ್ಚು ಮಾಡುತ್ತಾರೆ.
ವಿಶೇಷವಾಗಿ ವಯಸ್ಸಾದ ನಂತರ, ಮುಖ ಸುಕ್ಕಾದರಂತೂ ಮುಖದ ಹೊಳಪನ್ನು ಪುನಃಸ್ಥಾಪಿಸಲು ಕಷ್ಟವಾಗುತ್ತದೆ. ಆದರೆ 45 ನೇ ವಯಸ್ಸಿನಲ್ಲಿಯೂ ಸಹ, ಮನೆಯಲ್ಲಿ ಕೆಲವು ವಸ್ತುಗಳನ್ನ ಬಳಸುವ ಮೂಲಕ ನಿಮ್ಮ 25 ವರ್ಷದ ಹೊಳಪನ್ನು ಮರಳಿ ಪಡೆಯಬಹುದು.
ಮುಖದ ಸುಕ್ಕು ಸಮಸ್ಯೆಗಳಿಗೆ ಕೋಕಾ ಪೌಡರ್ ಉತ್ತಮ ಪ್ರಯೋಜನಕಾರಿಯಾಗಿದೆ. ಇದು ಮುಖದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಚರ್ಮವನ್ನು ಬಿಗಿಗೊಳಿಸುತ್ತದೆ.
1 ಚಮಚ ಕೋಕಾ ಪೌಡರ್, 1/2 ಚಮಚ ಮೊಸರು, 1/2 ಚಮಚ ಆಲೋವೆರಾ ಜೆಲ್ ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ಇದಾದ ಬಳಿಕ ಬೆಚ್ಚನೆಯ ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ. ಈ ಫೇಸ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಹಾಕಿ ನೋಡಿ.