ಬಾದಾಮಿ ಎಣ್ಣೆ ಎಲ್ಲಾ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ಮುಖದ ಅಂದವನ್ನು ಹೆಚ್ಚಿಸುತ್ತದೆ.
ಬಾದಾಮಿ ಎಣ್ಣೆಯನ್ನು ನಿಯಮಿತವಾಗಿ ಮಸಾಜ್ ಮಾಡುತ್ತ ಬಂದರೆ ಚರ್ಮದ ಮೇಲಿನ ಹಳೆಯ ಕಲೆಗಳು ಮಾಯವಾಗುತ್ತವೆ. ಚರ್ಮದ ರಂಧ್ರಗಳು ತೆರೆದುಕೊಂಡು, ಆಮ್ಲಜನಕ ಜೀವಕೋಶಗಳನ್ನು ತಲುಪುತ್ತದೆ.
ರಾತ್ರಿ ಮಲಗುವ ಮುನ್ನ ಹತ್ತಿಯಲ್ಲಿ ಬಾದಾಮಿ ಎಣ್ಣೆಯನ್ನು ಹಚ್ಚಿ ಮುಖವನ್ನು ಸ್ವಚ್ಛಗೊಳಿಸಿ. ಮುಖದ ಮೇಲೆ ಮೊಡವೆ ಮತ್ತು ಮೊಡವೆಗಳ ಕಲೆಗಳಿದ್ದರೆ ಬಾದಾಮಿ ಎಣ್ಣೆಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಸೇರಿಸಿ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟಿರಿಯಲ್ ಅಂಶಗಳು ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.