ಮಾಮೂಲಾಗಿ ತರಕಾರಿಯನ್ನ ಅಡುಗೆ ಮಾಡಲು ನಾವು ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರು ಹೀಗೆ ಹತ್ತು ಹಲವು ಅಡುಗೆ ಮಾಡುತ್ತೇವೆ. ಆದ್ರೆ ಇದೆ ತರಕಾರಿಗಳನ್ನ ಬಳ್ಸಿಕೊಂಡು ನಮ್ಮ ಮುಖದ ಕಾಂತಿಯನ್ನ ಹೆಚ್ಚಿಸಬಹುದು ಎಂಬುದು ನಿಮಗೆ ಗೊತ್ತಾ?.
ಇವತ್ತು ನಾವು ಕೆಲವು ತರಕಾರಿಗಳನ್ನ ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸೋದು ಹೇಗೆ ಅಂತ ನೋಡೋಣ. ಆರೋಗ್ಯಕರ ಚರ್ಮಕ್ಕಾಗಿ ಕೆಲವು ತರಕಾರಿಗಳ ಉಪಯೋಗ ಮತ್ತು ಉಪಯುಕ್ತತೆ ಇಲ್ಲಿದೆ
ಟೊಮೇಟೊ
ಟೊಮೇಟೊವನ್ನು ಸ್ಲೈಸ್ ತೆಗೆದು ಮುಖದ ಮೇಲೆ ಇಟ್ಟು ಮೃದುವಾಗಿ ಮಸಾಜ್ ಮಾಡಿದರೆ ಮುಖದ ಕಲೆ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ಸ್ಕಿನ್ ಗೆ ಒಂದು ರೀತಿಯ ತಾಜಾತನ ನೀಡುತ್ತದೆ. ಟೊಮೇಟೊ ರಸವನ್ನು ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುತ್ತದೆ.
ಕ್ಯುಕಂಬರ್
ತ್ವಚೆಯನ್ನು ತಂಪಾಗಿಸಲು ಮತ್ತು ತೇವಾಂಶ ನೀಡಲು ಸಹಕಾರಿಯಾಗಿದೆ. ಜೊತೆಗೆ ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಲೂಗಡ್ಡೆ
ಮುಖದ ಕಪ್ಪು ಕಲೆಗಳನ್ನು ನಿವಾರಿಸಲು ಆಲೂಗಡ್ಡೆ ರಸ ಬಳಸಬಹುದು. ಹಾಗೂ ನಿಮ್ಮ ಸ್ಕಿನ್ ಟ್ಯಾನ್ ಆಗಿದ್ದರೆ ಆಲೂಗಡ್ಡೆ ಜೊತೆ ಕಡಲೆ ಹಿಟ್ಟು ಸೇರಿಸಿ ಮುಖದ ಮೇಲೆ ಪ್ಯಾಕ್ ಹಾಕಿದರೆ ಟ್ಯಾನ್ ಮಾಯಾ.
ಕ್ಯಾರೆಟ್
ಕ್ಯಾರೆಟ್ ನಲ್ಲಿ ಬಿಟಾ-ಕೆರೋಟೀನ್ ಇರುವುದರಿಂದ ಚರ್ಮವನ್ನು ಆರೋಗ್ಯಕರವಾಗಿ ಇಡಲು ಸಹಾಯಮಾಡುತ್ತದೆ.
ಪುದಿನ
ಪುದಿನ ಎಲೆಯನ್ನು ಕ್ಯಾರೆಟ್ ಜೊತೆ ಮಿಶ್ರ ಮಾಡಿ ಸೇವಿಸುವುದರಿಂದ ತ್ವಚೆಯ ತಾಜಾತನ ಹಾಗೂ ಚರ್ಮದ ಕೊಳಕು ನಿವಾರಣೆಗೆ ಸಹಾಯ ಮಾಡುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಪುದಿನಾ ರಸವನ್ನು ಮುಖಕ್ಕೆ ಹಚ್ಚಬಹುದು.
ಈ ತರಕಾರಿಗಳನ್ನು ಸೌಂದರ್ಯ ವೃದ್ಧಿಗೆ ದಿನನಿತ್ಯ ಬಳಸಬಹುದು. ಜೊತೆಗೆ ಆರೋಗ್ಯಕರ ತ್ವಚೆಗೆ ನೀರನ್ನು ಹೆಚ್ಚು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಕೂಡ ಅತ್ಯಂತ ಮುಖ್ಯ.