April 11, 2026
Saturday, April 11, 2026
spot_img

Skin Care | ಬೆಳಗ್ಗೆ ಎದ್ದ ತಕ್ಷಣ ಮುಖದ ಮೇಲೆ ಐಸ್ ರಬ್ ಮಾಡೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋದು ಬಹುತೇಕ ಜನರ ಹವ್ಯಾಸ. ಆದರೆ ಅದಕ್ಕಿಂತ ಮೊದಲು ಮುಖಕ್ಕೆ ಒಂದು ಐಸ್ ಕ್ಯೂಬ್ ರಬ್ ಮಾಡಿದ್ರೆ ನಿಮ್ಮ ಚರ್ಮಕ್ಕೆ ಸಿಗೋ ಲಾಭಗಳು ಸಾಕಷ್ಟು. ಮನೆಯಲ್ಲೇ ಸಿಗುವ ಐಸ್ ತುಂಡು, ನಿಮ್ಮ ಸ್ಕಿನ್ ಕೇರ್ ರೂಟೀನ್‌ಗೆ ಹೊಸ ಚೈತನ್ಯ ನೀಡಬಹುದು.

ಮೊದಲಿಗೆ, ಐಸ್ ರಬ್ ಮುಖದ ಊತವನ್ನು ಕಡಿಮೆ ಮಾಡುತ್ತದೆ. ರಾತ್ರಿ ನಿದ್ರೆಯ ನಂತರ ಕಣ್ಣುಗಳ ಸುತ್ತ ಕಾಣಿಸುವ ಪಫಿನೆಸ್, ಐಸ್‌ನ ತಂಪಿನಿಂದ ತಕ್ಷಣ ಇಳಿಯುತ್ತದೆ. ಇದು ಚರ್ಮಕ್ಕೆ ತಾಜಾ ಲುಕ್ ನೀಡುತ್ತದೆ.

ಚರ್ಮದ ರಂಧ್ರಗಳನ್ನು ಸಣ್ಣದಾಗಿ ಕಾಣುವಂತೆ ಮಾಡುತ್ತದೆ. ತಂಪಿನ ಪರಿಣಾಮದಿಂದ ಪೋರ್ಸ್ ಕಟ್ಟಿ, ಚರ್ಮ ಮೃದುವಾಗಿ ಕಾಣುತ್ತದೆ. ಮೇಕಪ್ ಮಾಡುವವರಿಗೆ ಇದು ಉತ್ತಮ ಬೇಸ್ ನೀಡುತ್ತದೆ.

ರಕ್ತ ಸಂಚಲನವನ್ನು ಉತ್ತೇಜಿಸುತ್ತದೆ. ಐಸ್ ಸ್ಪರ್ಶದಿಂದ ಮುಖದಲ್ಲಿ ರಕ್ತಪ್ರವಾಹ ಹೆಚ್ಚಾಗಿ, ನೈಸರ್ಗಿಕ ಗ್ಲೋ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ:

ಮೊಡವೆ ಮತ್ತು ಚರ್ಮದ ಕೆಂಪು ಕಡಿಮೆ ಮಾಡಲು ಸಹಕಾರಿ. ಚರ್ಮದಲ್ಲಿ ಉರಿಯೂತ ಇದ್ದರೆ, ಐಸ್ ಅದನ್ನು ಶಮನಗೊಳಿಸುತ್ತದೆ.

ತೈಲಯುಕ್ತ ಚರ್ಮ ಹೊಂದಿರುವವರಿಗೆ ಇದು ಹೆಚ್ಚು ಉಪಯುಕ್ತ. ಐಸ್ ರಬ್ ಮಾಡಿದರೆ ಎಣ್ಣೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಆದರೆ ಐಸ್ ಅನ್ನು ನೇರವಾಗಿ ಹೆಚ್ಚು ಸಮಯ ರಬ್ ಮಾಡಬಾರದು. ಸಣ್ಣ ಬಟ್ಟೆಯಲ್ಲಿ ಹೊದಿಸಿ, 1–2 ನಿಮಿಷ ಮಾತ್ರ ಬಳಸಿ. ನಿಯಮಿತವಾಗಿ ಮಾಡಿದರೆ ನಿಮ್ಮ ಮುಖ ದಿನವೂ ತಾಜಾ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !