ಬೇಸಿಗೆಯಲ್ಲಿ ಬಿಸಿಲು ಹೆಚ್ಚು. ಹಾಗಾಗಿ ಚರ್ಮದ ಆರೈಕೆಯ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಜೊತೆಗೆ ಈ ಸಮಯದಲ್ಲಿ ಮುಖ ಟ್ಯಾನ್ ಆಗೋದು ಸರ್ವೇ ಸಾಮಾನ್ಯ. ಇದಕ್ಕೆ ಮನೆಯಲ್ಲೇ ಕೆಲವೊಂದು ಪದಾರ್ಥಗಳನ್ನು ಬಳಸಿ ಮುಖದ ಟ್ಯಾನಿಂಗ್ ತೆಗೆದುಹಾಕಿ ಚರ್ಮವನ್ನು ಹೊಳೆಯುವಂತೆ ಮಾಡಬಹುದು.
ಮೊಸರು ಮತ್ತು ಅರಿಶಿನ
2 ಟೀ ಚಮಚ ಮೊಸರಿನಲ್ಲಿ ಅರ್ಧ ಟೀ ಚಮಚ ಅರಿಶಿನ ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಕಳೆದ ನಂತರ ತೊಳೆಯಿರಿ. ಇದು ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿವಾರಕವಾಗಿದ್ದು, ಟ್ಯಾನಿಂಗ್ ತೆಗೆಯಲು ಬಹಳ ಉಪಯುಕ್ತವಾಗಿದೆ.
ಮೊಸರು ಮತ್ತು ಕಡಲೆ ಹಿಟ್ಟು
ಸ್ವಲ್ಪ ಕಡಲೆ ಹಿಟ್ಟು ಮತ್ತು ಮೊಸರನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಟ್ಯಾನಿಂಗ್ ಕಡಿಮೆ ಮಾಡುತ್ತದೆ ಮತ್ತು ಮುಖದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
ಮೊಸರು ಮತ್ತು ಅಲೋವೆರಾ
ಮೊಸರು ಮತ್ತು ಅಲೋವೆರಾವನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ. ಇದು ಚರ್ಮಕ್ಕೆ ಹಿತವೆನಿಸಿಸುವಂತೆ ಫೀಲ್ ಕೊಡುತ್ತದೆ.
ಮೊಸರು ಮತ್ತು ಜೇನುತುಪ್ಪ
ಮೊಸರು ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಹಚ್ಚಿ. ಈ ಫೇಸ್ ಪ್ಯಾಕ್ ವಿಶೇಷವಾಗಿ ಒಣ ಮತ್ತು ಸೂಕ್ಷ್ಮ ಚರ್ಮಕ್ಕೆ ವಿಶೇಷವಾಗಿ ಒಳ್ಳೆಯದು.
ಈ ಎಲ್ಲಾ ಫೇಸ್ ಪ್ಯಾಕ್ ಗಳು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಜೊತೆಗೆ ಟ್ಯಾನಿಂಗ್ ಕಡಿಮೆ ಮಾಡುವಲ್ಲಿ ಉಪಯುಕ್ತವಾಗಿದೆ.