October 2, 2026
Friday, October 2, 2026
spot_img

ಅಂಗಡಿಯ ಡೇಟ್‌ ಬೈಟ್ಸ್‌ ಬೇಡ, ಮನೆಯಲ್ಲೇ ಇದನ್ನು ಸುಲಭವಾಗಿ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಡೇಟ್ಸ್
ಬಾದಾಮಿ
ಪಿಸ್ತಾ
ಬೆಲ್ಲ ಬೇಕಿದ್ದಲ್ಲಿ
ತುಪ್ಪ

ಮಾಡುವ ವಿಧಾನ
ಮೊದಲು ಸಾಫ್ಟ್‌ ಆಗಿರುವ ಸಿಹಿ ಖರ್ಜೂರವನ್ನು ತೆಗೆದುಕೊಳ್ಳಿ, ಬೀಜವನ್ನು ತೆಗೆದು ಒಂದು ಬೌಲ್‌ಗೆ ಹಾಕುತ್ತಾ ಹೋಗಿ
ಆನಂತರ ಅದನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ
ನಂತರ ಪ್ಯಾನ್‌ ಅಥವಾ ಏರ್ಫ್ರೈಯರ್‌ನಲ್ಲಿ ಬಾದಾಮಿ ಹಾಗೂ ಪಿಸ್ತಾವನ್ನು ರೋಸ್ಟ್‌ ಮಾಡಿಕೊಳ್ಳಿ
ಅದು ತಣ್ಣಗಾದ ನಂತರ ಕತ್ತರಿಸಿ ಇಟ್ಟುಕೊಳ್ಳಿ
ಈ ಡ್ರೈ ಫ್ರೂಟ್ಸ್‌ನ್ನು ಮ್ಯಾಶ್‌ ಮಾಡಿದ ಖರ್ಜೂರಕ್ಕೆ ಹಾಕಿ
ಕೈಯಲ್ಲಿ ತುಪ್ಪ ಹಚ್ಚಿಕೊಂಡು ಅದನ್ನೆಲ್ಲಾ ಒಂದು ಬಟರ್‌ ಪೇಪರ್‌ ಮೇಲೆ ರೋಲ್‌ ಮಾಡಿ
ಡ್ರೈ ಆಗಲು ಬಿಡಿ, ಆನಂತರ ಕತ್ತರಿಸಿ ಬಾಕ್ಸ್‌ನಲ್ಲಿ ಇಟ್ಟುಕೊಳ್ಳಿ
ಮಕ್ಕಳು ಹಸಿವು ಎಂದು ಹೇಳಿದರೆ ತಕ್ಷಣ ಇದನ್ನು ನೀಡಬಹುದು, ಇನ್ನು ತಿಂಡಿ ಅಥವಾ ಊಟ ಲೇಟಾಗಿದೆ ಎನ್ನುವಾಗಲೂ ಎನರ್ಜಿಗಾಗಿ ಇದನ್ನು ಬಳಕೆ ಮಾಡಿ

Must Read